Home » Karkala: ಬಜಗೋಳಿಯಲ್ಲಿ ಸಿಡಿಲು ಬಡಿದು ಯುವಕ ಮೃತ್ಯು!

Karkala: ಬಜಗೋಳಿಯಲ್ಲಿ ಸಿಡಿಲು ಬಡಿದು ಯುವಕ ಮೃತ್ಯು!

0 comments

Karkala: ಹೊಸ ವಿದ್ಯುತ್‌ ತಂತಿ ಅಳವಡಿಸುವ ವೇಳೆ ಸಿಡಿಲು ಬಡಿಲು ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿದ ಘಟನೆ ಬಜಗೋಳಿಯ ಅಬ್ಬೆಂಜಾಲು ಬಳಿ ಜ. 14ರ ಸಂಜೆ ಸಂಭವಿಸಿದೆ.

ಅಸ್ಸಾಂ ಮೂಲದ ಶಂಕರ್‌ (25) ಮೃತಪಟ್ಟ ದುರ್ದೈವಿ. ಕಾರ್ಕಳದಿಂದ ಬಜಗೋಳಿಗೆ ಹೊಸದಾಗಿ ವಿದ್ಯುತ್‌ ಲೈನ್‌ ಅಳವಡಿಸಲಾಗುತ್ತಿದ್ದು ಅಸ್ಸಾಂ ಮೂಲದ ಶಂಕರ್‌ ಹಾಗೂ ರುಬಾಂಗ್‌ (25) ಕಂಬವೇರಿ ಕೆಲಸ ನಿರ್ವಹಿಸುತ್ತಿದ್ದರು.

ಈ ವೇಳೆ ಸಿಡಿಲು ಬಡಿದ ಪರಿಣಾಮ ಇಬ್ಬರೂ ಕಂಬದಿಂದ ನೆಲಕ್ಕುರುಳಿದ್ದರು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಕಾರ್ಕಳ ರೋಟರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಈ ವೇಳೆಗಾಗಲೇ ಶಂಕರ್‌ (25) ಮೃತಪಟ್ಟಿರುತ್ತಾರೆ. ರುಬಾಂಗ್‌ ಚೇತರಿಸಿಕೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

You may also like