4
ಹೊಸದಿಲ್ಲಿ: ಏರ್ ಇಂಡಿಯಾ ವಿಮಾನದ ಎಂಜಿನ್‌ಗೆ ಲಗೇಜ್ ಸಿಲುಕಿ ಎಂಜಿನ್ ಹಾಳಾದ ಘಟನೆ ವರದಿಯಾಗಿದೆ. ‘ಏರ್ ಬಸ್ ಎ350’ ವಿಮಾನವು ದಟ್ಟವಾದ ಮಂಜಿನಲ್ಲಿ ಚಲಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ದಿಲ್ಲಿ- ನ್ಯೂಯಾರ್ಕ್ ನಡುವೆ ಸಂಚರಿಸುವ ಎಐ101 ವಿಮಾನವು ಇರಾನ್ ವಾಯುಮಾರ್ಗವಾಗಿ ತೆರಳುತ್ತಿತ್ತು. ಆದರೆ ಸಂಘರ್ಷದ ಪರಿಣಾಮ ಇರಾನಿನ ವಾಯು ಪ್ರದೇಶ ಮುಚ್ಚಿದ ಪರಿಣಾಮ ಅದು ದಿಲ್ಲಿಗೆ ಮರಳಿತ್ತು. ವಿಮಾನ ದಿಲ್ಲಿಯಲ್ಲಿ ಇಳಿಯುತ್ತಿದ್ದ ವೇಳೆ ಲಗೇಜ್ ಕಂಟೇನರ್ ಅನ್ನು ಎಂಜಿನ್ ಫ್ಯಾನ್ ಬ್ರೇಡ್‌ಗಳು ಸೆಳೆದು ಕೊಂಡು ಹಾನಿ ಸಂಭವಿಸಿದೆ ಎಂದು ವಿಮಾನ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.
ಎಂಜಿನ್ ಫ್ಯಾನ್ ತಿರುಗುತ್ತಿದ್ದ ವೇಗಕ್ಕೆ ಲಗೇಜ್ ಕಂಟೇನರ್ ಬಂದು ಸಿಲುಕಿ ಎಂಜಿನ್‌ಗೆ ಅಪ್ಪಳಿಸಿದ್ದು, ಈ ವೇಳೆ ಎಂಜಿನ್ ಗೆ ಗಂಭೀರ ಹಾನಿಯಾಗಿದೆ.
