Home » Narayana Gowda : ಅಶ್ವಿನಿ ಗೌಡ ಪರ ನಿಂತಿರುವುದೇಕೆ? ಕರವೇ ನಾರಾಯಣಗೌಡ ಸ್ಪಷ್ಟನೆ

Narayana Gowda : ಅಶ್ವಿನಿ ಗೌಡ ಪರ ನಿಂತಿರುವುದೇಕೆ? ಕರವೇ ನಾರಾಯಣಗೌಡ ಸ್ಪಷ್ಟನೆ

0 comments

 

Narayana Gowda: ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಬೆರಳಣಿಕೆಯ ದಿನಗಳು ಉಳಿದಿದ್ದು, ಟ್ರೋಫಿ ಯಾರು ಗೆಲ್ತಾರೆ ಎಂಬುದರ ಬಗ್ಗೆ ತೀವ್ರ ಕುತೂಹಲ ಸೃಷ್ಟಿಯಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಸುದೀಪ್ ನಿವಾಸಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣ ಗೌಡರು ಭೇಟಿ ನೀಡಿರುವ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆದರೆ ನಾರಾಯಣಗೌಡರು ತಮ್ಮ ಮಗನ ಮದುವೆಯ ಆಮಂತ್ರಣ ಪತ್ರಿಕೆಯನ್ನು ನೀಡಲು ಸುದೀಪ್ ಮನೆಗೆ ತೆರಳಿದ್ದಾಗಿ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಇದರ ಜೊತೆಗೆ ತಾವೇಕೆ ಅಶ್ವಿನಿ ಗೌಡ ಅವರ ಪರ ಇದ್ದೇವೆ ಎಂಬುದಕ್ಕೂ ಕಾರಣವನ್ನು ನೀಡಿದ್ದಾರೆ.

ಬಿಗ್‌ಬಾಸ್ ಸ್ಪರ್ಧಿಯಾಗಿರುವ ಅಶ್ವಿನಿ ಗೌಡ ಸಹ ಕನ್ನಡ ಪರ ಹೋರಾಟದಲ್ಲಿ ಗುರುತಿಸಿಕೊಂಡಿದ್ದರು. ಇನ್ನು ಅಶ್ವಿನಿ ಗೌಡ ನಾರಾಯಣ ಗೌಡರ ಶಿಷ್ಯೆ ಎಂದು ಹೇಳಲಾಗುತ್ತಿದೆ. ಇನ್ನು ಫಿನಾಲೆ ಹಂತದಲ್ಲಿರುವ ಸ್ಪರ್ಧಿಗಳಿಗೆ ಮೂರು ಆಸೆಗಳನ್ನು ಕೋರಿಕೊಳ್ಳಲು ಅವಕಾಶ ನೀಡಲಾಗಿತ್ತು. ಅದರಂತೆ ಅಶ್ವಿನಿಗೌಡ ಬಿಗ್‌ಬಾಸ್ ಮನೆಯಲ್ಲಿ ನಾರಾಯಣ ಗೌಡರನ್ನು ನೋಡಬೇಕು. ಅವರ ಅಶೀರ್ವಾದ ಪಡೆದುಕೊಳ್ಳಬೇಕು ಎಂದು ಹೇಳಿದ್ದರು. ಈ ಸಮಯದಲ್ಲಿಯೇ ಕಿಚ್ಚ ಸುದೀಪ್ ಅವರನ್ನು ಕರವೇ ನಾರಾಯಣಗೌಡರು ಭೇಟಿಯಾಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಬಿಗ್ ಬಾಸ್ ಫಿನಾಲೆ ಹೊತ್ತಲ್ಲಿ ನಾರಾಯಣಗೌಡರು ಸುದೀಪ್ ಅವರನ್ನು ಭೇಟಿಯಾಗಿರುವುದು ಅಶ್ವಿನಿ ಗೌಡ ಅವರನ್ನು ಗೆಲ್ಲಿಸುವ ಸಲುವಾಗಿಯೇ ಎಂಬ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು. ಇದೀಗ ಈ ವಿಚಾರವಾಗಿ ನಾರಾಯಣಗೌಡರು “ಸೋಶಿಯಲ್ ಮೀಡಿಯಾ ಪಾತಕಿಗಳನ್ನು ಕಾನೂನಿನ ಮೂಲಕ ಹೇಗೆ ರಿಪೇರಿ ಮಾಡಬೇಕೆಂದು ನಮಗೆ ಚೆನ್ನಾಗಿ ಗೊತ್ತು” ಎಂದು ಗುಡುಗಿದ್ದಾರೆ.

ಅಶ್ವಿನಿ ಗೌಡ ಬೆಂಬಲಕ್ಕೆ ಕಾರಣವೇನು?

“ಅಶ್ವಿನಿ ಗೌಡ ಕೇವಲ ಒಬ್ಬ ಬಿಗ್ ಬಾಸ್ ಸ್ಪರ್ಧಿಯಲ್ಲ, ಕಳೆದ 20 ವರ್ಷಗಳಿಂದ ಕನ್ನಡ ನಾಡು, ನುಡಿಗಾಗಿ ಬೀದಿಯಲ್ಲಿ ನಿಂತು ಹೋರಾಟ ಮಾಡಿದ ಹೆಣ್ಣುಮಗಳು. ಕನ್ನಡದ ಪರ ಹೋರಾಡಿ ಹತ್ತಾರು ಕೇಸುಗಳನ್ನು ಮೈಮೇಲೆ ಎಳೆದುಕೊಂಡು ಕೋರ್ಟ್ ಮೆಟ್ಟಿಲು ಹತ್ತಿದವರು. ಒಬ್ಬ ಕನ್ನಡದ ಹೋರಾಟಗಾರ ಬಿಗ್ ಬಾಸ್ ಮನೆಗೆ ಹೋದಾಗ ಅವರನ್ನು ಬೆಂಬಲಿಸುವುದು ಕರವೇ ಧರ್ಮ. ಇಲ್ಲಿ ಜಾತಿ ಅಥವಾ ಧರ್ಮದ ಲೆಕ್ಕಾಚಾರವಿಲ್ಲ, ಕೇವಲ ಕನ್ನಡದ ಲೆಕ್ಕಾಚಾರ ಮಾತ್ರ ಇದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ

You may also like