Home » AP: ಕೋಳಿ ಅಂಕದಲ್ಲಿ 1.5 ಕೋಟಿ ಗೆದ್ದ ವ್ಯಕ್ತಿ!!

AP: ಕೋಳಿ ಅಂಕದಲ್ಲಿ 1.5 ಕೋಟಿ ಗೆದ್ದ ವ್ಯಕ್ತಿ!!

0 comments

 

AP: ಆಂಧ್ರಪ್ರದೇಶದಲ್ಲಿ ಸಂಕ್ರಾಂತಿ ಪ್ರಯುಕ್ತ ನಡೆದ ಕೋಳಿ ಕಾಳಗದಲ್ಲಿ ವ್ಯಕ್ತಿಯೊಬ್ಬ 1.53 ಕೋಟಿ ರೂ.,ಗಳನ್ನು ಗೆದ್ದಿರುವ ಘಟನೆ ನಡೆದಿದೆ. ಈ ಮೊತ್ತವು ಕೋಳಿ ಕಾಳಗ ಇತಿಹಾಸದಲ್ಲೇ ದಾಖಲೆ ಎಂದು ಸ್ಥಳೀಯರು ನಂಬಿದ್ದಾರೆ.

ಹೌದು, ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ತಾಡೇಪಲ್ಲಿಗುಡೆಮ್ ಪಟ್ಟಣದಲ್ಲಿ ನಡೆದ ಈ ಕೋಳಿ ಕಾಳಗದಲ್ಲಿ ರಾಜಮಂಡ್ರಿ ರಮೇಶ್ (Rajamandri Ramesh) ಎಂಬ ವ್ಯಕ್ತಿ ತನ್ನ ಕೋಳಿಯ ಮೂಲಕ ಕೋಟ್ಯಾಧಿಪತಿಯಾಗಿದ್ದಾರೆ. ಸಂಕ್ರಾಂತಿ ಪ್ರಯುಕ್ತ ನಡೆದ ಕೋಳಿ ಕಾಳಗದಲ್ಲಿ ಪ್ರಭಾಕರ್ ಎಂಬವರು ತಮ್ಮ ಕೋಳಿಗಳ ಮೇಲೆ ಭಾರೀ ಮೊತ್ತದ ಪಣ ತೊಟ್ಟಿದ್ದರು. ಹೋರಾಟಕ್ಕೆ ಬಳಸಲಾದ ಕೋಳಿಗಳ ಕಾಲುಗಳಿಗೆ ಚಾಕುಗಳನ್ನು ಕಟ್ಟಲಾಗಿದ್ದು, ಇದು ಹೋರಾಟವನ್ನು ಇನ್ನಷ್ಟು ಅಪಾಯಕಾರಿಯಾಗಿಸಿದೆ. ಅಂತಿಮವಾಗಿ ರಮೇಶ್ ಅವರ ಕೋಳಿ ವಿಜಯಶಾಲಿಯಾಗಿ ಹೊರಹೊಮ್ಮಿದ್ದು, 1.53 ಕೋಟಿ ರೂ.ಗಳ ಮೊತ್ತವನ್ನು ಗೆಲ್ಲುವಂತೆ ಮಾಡಿದೆ.

ವಿಜಯದ ಬಳಿಕ ಮಾತನಾಡಿದ ರಮೇಶ್, “ನನ್ನ ಕೋಳಿಗಳನ್ನು ಹೋರಾಟಕ್ಕೆ ತಯಾರಿಸಲು ಕಳೆದ ಆರು ತಿಂಗಳುಗಳಿಂದ ವಿಶೇಷ ಕಾಳಜಿ ವಹಿಸಿದ್ದೇನೆ. ಉತ್ತಮ ಆಹಾರ, ವ್ಯಾಯಾಮ ಮತ್ತು ವಿಶೇಷ ತಳಿಯ ಆಯ್ಕೆಯೇ ನನ್ನ ಗೆಲುವಿನ ರಹಸ್ಯ” ಎಂದು ತಿಳಿಸಿದ್ದಾರೆ. ಈ ಗೆಲುವಿನೊಂದಿಗೆ ರಮೇಶ್ ತಕ್ಷಣವೇ ಕೋಟ್ಯಾಧಿಪತಿಯಾಗಿದ್ದು, ಅವರ ಮನೆ ಮುಂದೆ ಜನಸಂದಣಿ ಜಮಾಯಿಸಿದ ದೃಶ್ಯಗಳು ಕಂಡುಬಂದವು.

You may also like