ಬೆಳ್ತಂಗಡಿ: ಕನ್ಯಾಡಿ 1 ಗ್ರಾಮದ ಅಂಡೀರುಮಾರು ನಿವಾಸಿ ಮಂಜಪ್ಪ ನಾಯ್ಕ (62) ಎಂಬುವವರು ಜ.16 ರಂದು ಬೆಳಿಗ್ಗೆ 8.15 ಗಂಟೆಗೆ ಮನೆಯ ಅಂಗಳದಲ್ಲಿರುವ ವೇಳೆ ಏಕಾಏಕಿ ಚಿರತೆ ದಾಳಿ ಮಾಡಿರುವ ಘಟನೆ ನಡೆದಿದೆ.
ಮಂಜಪ್ಪ ನಾಯಕರು ಕೂಡಲೇ ತಮ್ಮ ರಕ್ಷಣೆಗೆಂದು ಅಡಿಕೆ ಮರ ಏರಿದ್ದು, ಆದರೆ ಇವರ ಹಿಂದೆಯೇ ಬಂದ ಚಿರತೆ ಮರಕ್ಕೆ ಹತ್ತುತ್ತಿದ್ದ ಮಂಜಪ್ಪ ನಾಯ್ಕ ಅವರ ಕಾಲಿಗೆ ಕಚ್ಚಿ ಅವರನ್ನು ಕೆಳಗೆ ಎಳೆಯಲು ಪ್ರಯತ್ನ ಮಾಡಿದೆ. ಬೊಬ್ಬೆ ಹಾಕಿದ್ದಾಗ ಮನೆಯವರು ಓಡಿ ಬಂದಿದ್ದು, ಚಿರತೆ ಅಲ್ಲಿಂದ ಕಾಡಿಗೆ ಓಡಿ ಹೋಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮಂಜಪ್ಪ ನಾಯ್ಕ ಅವರ ಕಾಲಿಗೆ ಗಂಭಿರ ಗಾಯಗಳಾಗಿದೆ.
ಇದೀಗ ಇವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿದ್ದು, ಪರಿಶೀಲನೆ ಮಾಡುತ್ತಿದ್ದಾರೆ.
ಮಂಜಪ್ಪ ನಾಯ್ಕ ಅವರ ಮಗ ಪ್ರಭಾಕರ ನಾಯ್ಕ ಅವರು ತಂದೆಯ ಮೇಲೆ ನಡೆದ ಚಿರತೆ ದಾಳಿಯ ವಿಚಾರದ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಮಾತುಕತೆ ವಾಗ್ವಾದ ನಡೆದಿದೆ ಎನ್ನಲಾಗಿದೆ.
