6
Venur: ಐದು ಗ್ರಾಮಗಳಿಗೆ ಸಂಬಂಧಿಸಿದ ಶ್ರೀ ದೈವ, ಶ್ರೀ ಕೊಡಮಣಿತ್ತಾಯ ಹಾಗೂ ಪರಿವಾರ ಸಾನಿಧ್ಯ ಪಡ್ಡಂದಡ್ಕದ ಗಡುಸ್ಥಳ ಕಟ್ಟೆಯಲ್ಲಿ ಪುನಃ ಪ್ರತಿಷ್ಠಾ ಕಲಶಾಭಿಷೇಕ, ಪರ್ವಸೇವೆ ಹಾಗೂ ದೊಂಪದಬಲಿ ನೇಮೋತ್ಸವವು ವೇ.ಮೂ. ಮಾರೂರು ಖಂಡಿಗದ ರಾಮದಾಸ ಅಸ್ರಣ್ಣರ ಪೌರೋಹಿತ್ಯದಲ್ಲಿ ಜರಗಿತು.
ಪೆರಿಂಜೆ ರಾಜ್ಯಗುತ್ತು, ಕರಿಮಣೇಲು ಮಾಗಣೆಗುತ್ತು, ಬಡಕೋಡಿ ಗುತ್ತು, ಪಡೋಡಿಗುತ್ತು, ಮೂಡುಕೋಡಿಗುತ್ತು ಜೀಣೋದ್ಧಾರ ಸಮಿತಿಯ ಅಧ್ಯಕ್ಷ ಜಿನರಾಜ್ ಜೈನ್ ಪದ್ಮಾಂಬ ಹಾಗೂ ಐದು ಗ್ರಾಮಗಳ ಬರ್ಕೆಯವರು ಉಪಸ್ಥಿತಿಯಲ್ಲಿ ಬೆಳಿಗ್ಗೆ ಧರ್ಮದೈವಗಳ ಪ್ರತಿಷ್ಠೆ ಕಲಶಾಭಿಷೇಕ, ಪರ್ವಸೇವೆ ನಡೆಯಿತು.
ನವಕ ಕಲಶಾಭಿಷೇಕ, ವಿವಿಧ ಗುತ್ತುಗಳಿಂದ ಭಂಡಾರ ಬಂದು ಶ್ರೀ ದೈವ, ಶ್ರೀ ಕೊಡಮಣಿತ್ತಾಯ, ಶ್ರೀ ಕಲ್ಕುಡ ಕಲ್ಲುರ್ಟಿ, ಕಾಳಮ್ಮ ದೈವಗಳ ಬಲಿ ನೇಮ ನಡೆಯಿತು. ವಿವಿಧ ಗ್ರಾಮಗಳ ಸಾವಿರಾರು ಭಕ್ತರು ಆಗಮಿಸಿ ಗಂಧಪ್ರಸಾದ ಸ್ವೀಕರಿಸಿದರು.
