6
Ashwini Gowda : ಬಿಗ್‌ಬಾಸ್ ಸ್ಪರ್ಧಿಯಾಗಿರುವ ಅಶ್ವಿನಿ ಗೌಡ ಸಹ ಕನ್ನಡ ಪರ ಹೋರಾಟದಲ್ಲಿ ಗುರುತಿಸಿಕೊಂಡಿದ್ದರು. ಇನ್ನು ಅಶ್ವಿನಿ ಗೌಡ ನಾರಾಯಣ ಗೌಡರ ಶಿಷ್ಯೆ ಎಂದು ಹೇಳಲಾಗುತ್ತಿದೆ. ಇನ್ನು ಫಿನಾಲೆ ಹಂತದಲ್ಲಿರುವ ಸ್ಪರ್ಧಿಗಳಿಗೆ ಮೂರು ಆಸೆಗಳನ್ನು ಕೋರಿಕೊಳ್ಳಲು ಅವಕಾಶ ನೀಡಲಾಗಿತ್ತು. ಅದರಂತೆ ಅಶ್ವಿನಿಗೌಡ ಬಿಗ್‌ಬಾಸ್ ಮನೆಯಲ್ಲಿ ನಾರಾಯಣ ಗೌಡರನ್ನು ನೋಡಬೇಕು. ಅವರ ಅಶೀರ್ವಾದ ಪಡೆದುಕೊಳ್ಳಬೇಕು ಎಂದು ಹೇಳಿದ್ದರು. ಆದರೆ ಇದೀಗ ಕರವೇ ನಾರಾಯಣಗೌಡ ಅವರು ಅಶ್ವಿನಿಯವರ ಈ ಆಸೆ ಈಡೇರಲ್ಲ ಇಂದು ಓಪನ್ ಹೇಳಿಕೆ ನೀಡಿದ್ದಾರೆ.
ಹೌದು, ಅಶ್ವಿನಿ ಅವರು ಆಸೆ ಪಟ್ಟಂತೆ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ್ರು ಅವರು ಬಿಗ್ ಬಾಸ್ ಮನೆಗೆ ಬರಬಹುದಿತ್ತು. ಆದರೆ ಅವರೇ ಬರಲು ರೆಡಿ ಇಲ್ಲ. ಇನ್ನು ಏಳು ದಿನಗಳಲ್ಲಿ ಅವರ ಮಗನ ಮದುವೆ ಇದ್ದು, ಇನ್ನೂ 100 ಜನರಿಗೆ ಆಹ್ವಾನ ನೀಡಬೇಕಿದೆಯಂತೆ. ಬಿಗ್ ಬಾಸ್ ಮನೆಗೆ ಬಂದರೆ ಸಾಕಷ್ಟ ಸಮಯ ಅಲ್ಲೇ ವ್ಯರ್ಥವಾಗುತ್ತದೆ. ಹೀಗಾಗಿ ಅವರು ಸಮಯದ ಅಭಾವ ಇರೋದರಿಂದ ಆಗೋದಿಲ್ಲ ಎಂದಿದ್ದಾರೆ.
