Home » ಉಡುಪಿ: ಶಿರೂರು ಪರ್ಯಾಯ: ವಾಹನ ಸವಾರರಿಗೆ ಹೊಸ ಮಾರ್ಗಸೂಚಿ-ಜಿಲ್ಲಾಧಿಕಾರಿ

ಉಡುಪಿ: ಶಿರೂರು ಪರ್ಯಾಯ: ವಾಹನ ಸವಾರರಿಗೆ ಹೊಸ ಮಾರ್ಗಸೂಚಿ-ಜಿಲ್ಲಾಧಿಕಾರಿ

0 comments

ಉಡುಪಿ: ನಗರದ ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವ ಸಂದರ್ಭದಲ್ಲಿ ಭಕ್ತರ ಸುಗಮ ಸಂಚಾರಕ್ಕೆಂದು ಉಡುಪಿ ಜಿಲ್ಲಾಧೀಕಾರಿ ಸ್ವರೂಪ ಟಿ.ಕೆ. ಅವರು ವಾಹನ ಸಂಚಾರದಲ್ಲಿ ಬದಲಾವಣೆ ಮಾಡಿದ್ದಾರೆ.

1. ಕಾರ್ಕಳ: ಮಣಿಪಾಲ ಕಡೆಯಿಂದ ಉಡುಪಿ ನಗರಕ್ಕೆ ಬರುವಂತಹ ವಾಹನಗಳು:
ಜ. 17ರ ಸಂಜೆ 7 ಗಂಟೆಯವರೆಗೆ: ಕಾರ್ಕಳ ಮತ್ತು ಮಣಿಪಾಲದಿಂದ ಬರುವ ವಾಹನಗಳು ನೇರವಾಗಿ ಕಲ್ಸಂಕ ಮಾರ್ಗವಾಗಿ ಉಡುಪಿ ಸಿಟಿ ಮತ್ತು ಸರ್ವಿಸ್ ಬಸ್ ನಿಲ್ದಾಣಕ್ಕೆ ಪ್ರವೇಶಿಸಬಹುದು.
ಜ. 17ರ ಸಂಜೆ 7 ರಿಂದ ಜ. 18ರ ಬೆಳಗ್ಗೆ 7 ರವರೆಗೆ: ಈ ಅವಧಿಯಲ್ಲಿ ಉಡುಪಿ ನಗರಕ್ಕೆ ಎಲ್ಲಾ ರೀತಿಯ ವಾಹನಗಳ. ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

2. ರಾತ್ರಿ ವೇಳೆಯ ಬದಲಿ ಮಾರ್ಗ (ಸಂಜೆ 7 ರಿಂದ ಬೆಳಗ್ಗೆ 7 ರವರೆಗೆ):
ಮಣಿಪಾಲ ಸಿಂಡಿಕೇಟ್ ಸರ್ಕಲ್‌ನಿಂದ ಬರುವ ವಾಹನಗಳು ಲಕ್ಷ್ಮೀಂದ್ರ ನಗರ – ಸಗ್ರಿ ನೊಳೆ ರಸ್ತೆ – ಪೆರಂಪಳ್ಳಿ ಎಫ್.ಸಿ.ಐ (ಭಾರತೀಯ ಆಹಾರ ನಿಗಮ) ಮುಂಭಾಗದಿಂದ ಅಂಬಾಗಿಲು ಜಂಕ್ಷನ್ ತಲುಪಿ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಸೇರಬೇಕು. ಅಲ್ಲಿಂದ ನಿಟ್ಟೂರು ಮಾರ್ಗವಾಗಿ ಕರಾವಳಿ ಜಂಕ್ಷನ್‌ಗೆ ಆಗಮಿಸಬೇಕು. ಕರಾವಳಿ ಜಂಕ್ಷನ್ ವಾಹನಗಳ ಅಂತಿಮ ನಿಲುಗಡೆಯಾಗಿರುತ್ತದೆ.
ವಾಪಸು ಹೋಗುವಾಗಲೂ ಇದೇ ಮಾರ್ಗವಾಗಿ (ಕರಾವಳಿ ಜಂಕ್ಷನ್ – ನಿಟ್ಟೂರು – ಅಂಬಾಗಿಲು – ಪೆರಂಪಳ್ಳಿ – ಸಗ್ರಿ ನೊಳೆ – ಲಕ್ಷ್ಮೀಂದ್ರ ನಗರ – ಮಣಿಪಾಲ) ಸಂಚರಿಸಬೇಕು.

ಉಳಿದ ಮಾರ್ಗಗಳ ಸಂಚಾರ ಬದಲಾವಣೆ ಮತ್ತು ಪಾರ್ಕಿಂಗ್ ನಿಷೇಧದ ಕುರಿತು ಈ ಹಿಂದೆ ಹೊರಡಿಸಲಾದ ಅಧಿಸೂಚನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

You may also like