Home » ಉಡುಪಿ: ಶೀರೂರು ಪರ್ಯಾಯ: ಉಡುಪಿ ಸೇರಿ ಹಲವು ಕಡೆ ಜ.17,18 ಮದ್ಯ ಮಾರಾಟ ಇಲ್ಲ

ಉಡುಪಿ: ಶೀರೂರು ಪರ್ಯಾಯ: ಉಡುಪಿ ಸೇರಿ ಹಲವು ಕಡೆ ಜ.17,18 ಮದ್ಯ ಮಾರಾಟ ಇಲ್ಲ

0 comments
Ban on sale of liquor

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ನಡೆಯಲಿರುವ ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪರ್ಯಾಯೋತ್ಸವ ಅಂಗವಾಗಿ ಉಡುಪಿ ಜಿಲ್ಲಾಡಳಿತವು ನಗರದ ಸುತ್ತಮುತ್ತಲ ಗ್ರಾಮಗಳಲ್ಲಿ ಎರಡು ದಿನಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡಿ ಆದೇಶ ಹೊರಡಿಸಿದೆ.

ಜ.17 ರ ಬೆಳಿಗ್ಗೆ 10ಗಂಟೆಯಿಂದ ಜ.18 ರ ಸಂಜೆ 6 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧ ಮಾಡಿ ಜಿಲ್ಲಾಧಿಕಾರಿ ಡಾ.ಸ್ವರೂಪ ಟಿ.ಕೆ. ಅವರು ಆದೇಶ ನೀಡಿದ್ದಾರೆ.

ಉಡುಪಿ ನಗರಸಭೆ ವ್ಯಾಪ್ತಿ ಮಾತ್ರವಲ್ಲದೇ, ಉದ್ಯಾವರ, ಕೊರಂಗ್ರಪಾಡಿ, ಅಲೆವೂರು, ಹಿರೇಬೆಟ್ಟು, ಅಂಬಲಪಾಡಿ, ಕುತ್ಪಾಡಿ, ಕಡೆಕಾರು, ಕಿದಿಯೂರು, ಮೂಡುತೋನ್ಸೆ, ಪಡುತೋನ್ಸೆ ಗ್ರಾಮಗಳಲ್ಲಿ ಮದ್ಯ ಮಾರಾಟವನ್ನು ನಿಷೇಧ ಮಾಡಲಾಗಿದೆ.

ಈ ಅವಧಿಯಲ್ಲಿ ಸನ್ನದು ಹೊಂದಿರುವ ಎಲ್ಲಾ ಬಾರ್‌, ರೆಸ್ಟೋರೆಂಟ್‌, ವೈನ್‌ ಶಾಪ್‌ ಕಡ್ಡಾಯವಾಗಿ ಮುಚ್ಚಬೇಕು. ಆದೇಶ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

You may also like