Home » Bengaluru: ಬೆಂಗಳೂರಿನ 204 ಪಿಜಿಗಳ ತಪಾಸಣೆ: 6 ಪಿಜಿಗಳಿಗೆ ಬೀಗ, 1.96 ಲಕ್ಷ ದಂಡ

Bengaluru: ಬೆಂಗಳೂರಿನ 204 ಪಿಜಿಗಳ ತಪಾಸಣೆ: 6 ಪಿಜಿಗಳಿಗೆ ಬೀಗ, 1.96 ಲಕ್ಷ ದಂಡ

0 comments

 

Bengaluru: ಬೆಂಗಳೂರು ನಗರದಲ್ಲಿರುವ 204 ಪಿಜಿಗಳ ತಪಾಸಣೆ ನಡೆಸಿ, ನ್ಯೂನ್ಯತೆಗಳಿರುವ 6 ಪಿಜಿಗಳಿಗೆ ಅಧಿಕಾರಿಗಳು ಬೀಗ ಹಾಕಿದ್ದು, 1.96 ಲಕ್ಷ ರೂ. ದಂಡ ವಿಧಿಸಿದ್ದಾರೆ.

ಕೇಂದ್ರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಆದೇಶದಂತೆ ಆರೋಗ್ಯಾಧಿಕಾರಿ ಡಾ.ಶಿವಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಒಟ್ಟು 204 ಪಿಜಿಗಳ ತಪಾಸಣೆ ನಡೆಸಿದ್ದು, ಈ ಪೈಕಿ ನ್ಯೂನ್ಯತೆಗಳಿರುವ ಹಾಗೂ ಶುಚಿತ್ವ ಇಲ್ಲದ ಆರು ಪಿ.ಜಿಗಳಿಗೆ ಬೀಗ ಮುದ್ರೆ ಹಾಕಿಸಿದ್ದಾರೆ. ಜೊತೆಗೆ 1.96 ರೂ. ಲಕ್ಷ ದಂಡ ವಿಧಿಸಿದ್ದಾರೆ. 

ಶುದ್ಧ ಕುಡಿಯುವ ನೀರು, ಶುಚಿತ್ವ, ಅಡುಗೆ ಕೋಣೆ ನೈರ್ಮಲ್ಯ, ಸುರಕ್ಷತೆ, ಉತ್ತಮ ಶೌಚಾಲಯ ವ್ಯವಸ್ಥೆ, ಅಗ್ನಿಶಾಮಕ ಸಾಧನ, ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಕೆ ಮತ್ತು FSSAIನ ಆಹಾರ ಸುರಕ್ಷತಾ ಪ್ರಮಾಣ ಪತ್ರ ಸೇರಿದಂತೆ ಮೂಲಭೂತ ಸೌಕರ್ಯಗಳು ಇರುವ ಒಟ್ಟು 204 ಪೇಯಿಂಗ್ ಗೆಸ್ಟ್ ವಸತಿ ಗೃಹ ಉದ್ದಿಮೆಗಳ ತಪಾಸಣೆ ನಡೆಸಿದ್ದಾರೆ. ಈ ವೇಳೆ 6 ಪಿಜಿಗಳಲ್ಲಿ ನ್ಯೂನ್ಯತೆಗಳು ಇರೋದು ಬೆಳಕಿಗೆ ಬಂದಿದೆ.

7 ದಿನಗಳ ಒಳಗಾಗಿ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಕಾರ್ಯನಿರ್ವಹಣೆ ಮಾಡುವುದಕ್ಕೆ ಪಿಜಿ ಮಾಲೀಕರಿಗೆ ತಿಳುವಳಿಕೆ ಪತ್ರ ನೀಡಿ, ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ವೇಳೆ ಚಿಕ್ಕಪೇಟೆ ಮತ್ತು ಶಿವಾಜಿನಗರ ಆರೋಗ್ಯ ವೈದ್ಯಾಧಿಕಾರಿಗಳಿದ್ದರು.

You may also like