5
Rakshitha shetty: ಕಾಪು ಮೂಲದ ಬ್ಯೂಟಿ ಪಾರ್ಲರ್ ಮಾಲೀಕರೊಬ್ಬರು, ರಕ್ಷಿತಾ ಶೆಟ್ಟಿಗೆ ವೋಟ್ ಮಾಡಿದವರಿಗೆ ಉಚಿತ ಬ್ಯೂಟಿ ಸೇವೆಯನ್ನು ನೀಡಲಾಗುವುದು ಎಂಬ ಘೋಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಾರಿಯ ಕನ್ನಡ ಬಿಗ್‌ಬಾಸ್ ಸೀಸನ್ 12 ಹವಾ ಜೋರಾಗಿ ಕೇಳಿ ಬರುತ್ತಿದ್ದು, ಅದರಲ್ಲೂ ಕರಾವಳಿಯ ಪ್ರತಿಭೆ ರಕ್ಷಿತಾ ಶೆಟ್ಟಿ ಪ್ರೇಕ್ಷಕರ ಮನಗೆದ್ದ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. ಈ ಹಿನ್ನಲೆಯಲ್ಲಿ ರಕ್ಷಿತಾ ಶೆಟ್ಟಿಯವರ ಅಭಿಮಾನಿಯಾಗಿರುವ ಕಾಪು ಮೂಲದ ಬ್ಯೂಟಿ ಪಾರ್ಲರ್ ಮಾಲೀಕರೊಬ್ಬರು, ಬಿಗ್‌ಬಾಸ್ ಸ್ಪರ್ಧೆಯಲ್ಲಿ ರಕ್ಷಿತಾ ಶೆಟ್ಟಿಗೆ 99 ವೋಟ್ ಮಾಡಿದವರಿಗೆ ಮೂರು ದಿನಗಳ ಉಚಿತ ಐಬ್ರೋ ಹೇರ್ ಕಟ್ ಹಾಗೂ ಫೇಶಿಯಲ್ ಸೇವೆ ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈ ವಿಶಿಷ್ಟ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಪೋಸ್ಟ್ ವೈರಲ್ ಆಗಿದೆ.
