Home » Muzrai Department: ರಾಜ್ಯದಲ್ಲಿ ಹಲವು ದೇವಾಲಯಗಳು ನಾಪತ್ತೆ ಪ್ರಕರಣ – ಕಾರಣ ಕೊಟ್ಟ ಮುಜರಾಯಿ ಇಲಾಖೆ

Muzrai Department: ರಾಜ್ಯದಲ್ಲಿ ಹಲವು ದೇವಾಲಯಗಳು ನಾಪತ್ತೆ ಪ್ರಕರಣ – ಕಾರಣ ಕೊಟ್ಟ ಮುಜರಾಯಿ ಇಲಾಖೆ

0 comments

 

Muzrai Department: ಇತ್ತೀಚೆಗೆ ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ (Muzrai Department) ಸೇರಿದ ಸಾವಿರಾರು ದೇವಸ್ಥಾನಗಳು (Temple) ಕಣ್ಮರೆಯಾಗಿವೆ (Missing) ಎಂಬ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಬಿಜೆಪಿ ನಾಯಕ ಸಿಟಿ ರವಿ ಕೂಡ ಈ ವಿಚಾರದ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಇದೀಗ ದೇವಾಲಯಗಳ ನಾಪತ್ತೆ ಏಕಾಗಿದೆ ಎಂಬುದರ ಕುರಿತು ಮುಜರಾಯಿ ಇಲಾಖೆ ಕಾರಣ ಕೊಟ್ಟಿದೆ.

ಹೌದು, ರಾಜ್ಯದಲ್ಲಿ 34,563 ದೇವಸ್ಥಾನಗಳನ್ನು ಮುಜರಾಯಿ ಇಲಾಖೆ ನಿರ್ವಹಣೆ ಮಾಡುತ್ತದೆ. ಆದ್ರೆ ಇತ್ತೀಚಿನ ಸರ್ವೆಯಲ್ಲಿ ಈ ಸಂಖ್ಯೆಯಲ್ಲಿ 4610 ವ್ಯತ್ಯಾಸ ಕಂಡುಬಂದಿತ್ತು. ಇದು  ಅನುಮಾನಕ್ಕೆ ಕಾರಣವಾಗಿತ್ತು. ಇದೀಗ ದೇವಸ್ಥಾನಗದ ನಾಪತ್ತೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಮುಜರಾಯಿ ಇಲಾಖೆ, ಇಲ್ಲಿ ಯಾವುದೇ ಭ್ರಷ್ಟಾಚಾರದ ನಡೆದಿಲ್ಲ ಎಂಬ ಸಮರ್ಥನೆ ನೀಡಿದೆ. 

ಅಲ್ಲದೆ ಸಾಕಷ್ಟು ದೇವಸ್ಥಾನಗಳ ಸ್ಥಳಾಂತರ ಆಗಿರುವುದು, ಕೆಲವು ದೇವಾಲಯಗಳು ಜಲಾಶಯಗಳ ಹಿನ್ನೀರಿನಲ್ಲಿ ಮುಳುಗಡೆ ಆಗಿರುವುದು, ನೂರಾರು ದೇವಸ್ಥಾನಗಳ ದಾಖಲೆಗಳ ಕೊರತೆ ಇರುವುದು, ಕೆಲವು ದೇವಾಲಯದ ಹೆಸರು ಪುನರಾವರ್ತನೆ ಆಗಿರುವುದು,ಸೇರಿದಂತೆ ಹತ್ತು ಹಲವು ಕಾರಣಗಳಿಂದ ಈ ಗೊಂದಲ ಸೃಷ್ಟಿಯಾಗಿದೆ ಎಂದು ಇಲಾಖೆ ತಿಳಿಸಿದೆ.

You may also like