Home » Ashwini Gowda: ಅಶ್ವಿನಿ ಗೌಡಗೆ ಕನ್ನಡ ಯಾಕೆ ಬರಲ್ಲ? ಕರವೇ ನಾರಾಯಣ ಗೌಡ ಸ್ಪಸ್ಟೀಕರಣ

Ashwini Gowda: ಅಶ್ವಿನಿ ಗೌಡಗೆ ಕನ್ನಡ ಯಾಕೆ ಬರಲ್ಲ? ಕರವೇ ನಾರಾಯಣ ಗೌಡ ಸ್ಪಸ್ಟೀಕರಣ

0 comments

 

Ashwini Gowda : ಬಿಗ್ ಬಾಸ್ ಸ್ಪರ್ಧಿಯಾಗಿರುವ ಕನ್ನಡಪರ ಹೋರಾಟಗಾರ್ತಿ ಅಶ್ವಿನಿ ಗೌಡ ಅವರನ್ನು ಗೆಲ್ಲಿಸಬೇಕೆಂದು ಅನೇಕ ಅಭಿಮಾನಿಗಳು ಪಣ ತೊಟ್ಟಿದ್ದಾರೆ. ಈ ನಡುವೆ ಅಶ್ವಿನಿ ಗೌಡ ಅವರಿಗೆ ಕನ್ನಡ ಬರೆಯಲು ಬರುವುದಿಲ್ಲ ಎಂಬ ವಿಚಾರವನ್ನು ಟೀಕೆಗೆ ಒಳಗಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಅವರು ಸ್ಪಷ್ಟೀಕರಣ ನೀಡಿದ್ದಾರೆ

ಹೌದು, ಅಶ್ವಿನಿ ಅವರು ಬಿಗ್‌ ಬಾಸ್‌ ಮನೆಯಲ್ಲಿ ನಾನು ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿದವಳು, ನನಗೆ ಅಷ್ಟಾಗಿ ಕನ್ನಡ ಓದೋಕೆ, ಬರೆಯೋಕೆ ಬರೋದಿಲ್ಲ ಎಂದಿದ್ದರು. ಇನ್ನು ಕನ್ನಡ ಪದಗಳನ್ನು ಬರೆಯುವಾಗ ಕೂಡ ತಪ್ಪಾಗಿ ಬರೆದಿದ್ದರು. ಕನ್ನಡ ರಕ್ಷಣಾ ವೇದಿಕೆಯಲ್ಲಿ ಇರುವವರಿಗೆ, ಕನ್ನಡ ಹೋರಾಟಗಾರ್ತಿಗೆ ಕನ್ನಡ ಬರೋದಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು. ಈ ಬಗ್ಗೆ  ನಾರಾಯಣಗೌಡ್ರು ಉತ್ತರ ಕೊಟ್ಟಿದ್ದಾರೆ.

“ಅಶ್ವಿನಿ ಗೌಡ ತಂದೆ ಆಗರ್ಭ ಶ್ರೀಮಂತರು, ಹೀಗಾಗಿ ಮಗಳನ್ನು ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿಸಿದ್ದಾರೆ. ಇನ್ನೊಂದು ಕಡೆ ಅಶ್ವಿನಿ ಗೌಡ ಅವರು ಕರವೇಗೆ ಬರುವಾಗ ನಾನು, ಅವರಿಗೆ ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿದ್ದೀರಾ? ಕನ್ನಡ ಮಾಧ್ಯಮದಲ್ಲಿ ಓದಿದ್ದೀರಾ ಎಂದು ಪ್ರಶ್ನೆ ಮಾಡಿರಲಿಲ್ಲ. ನೀವು ಇಲ್ಲಿಗೆ ಬರಲು ಉದ್ದೇಶ ಏನು ಎಂದು ಕೇಳಿದಾಗ ಅವರು, “ನಾನು ಕನ್ನಡತಿ, ಕನ್ನಡದ ಮೇಲೆ ಅಭಿಮಾನ ಇದೆ, ಕನ್ನಡದ ಪರವಾಗಿ ಸೇವೆ ಮಾಡಬೇಕು. ಅದನ್ನು ನಾನು ಗಮನಕ್ಕೆ ತಗೊಂಡೆ ಅಷ್ಟೇ” ಎಂದು ಹೇಳಿದ್ದಾರೆ.

You may also like