Home » BBK-12 : ಬಿಗ್ ಬಾಸ್ ಗೆ ಕಿಚ್ಚ ಸುದೀಪ್ ಗೈರು- ಇಂದು ನಡೆಯಲ್ಲ ಫಿನಾಲೆ!!

BBK-12 : ಬಿಗ್ ಬಾಸ್ ಗೆ ಕಿಚ್ಚ ಸುದೀಪ್ ಗೈರು- ಇಂದು ನಡೆಯಲ್ಲ ಫಿನಾಲೆ!!

0 comments

BBK-12 : ಬಾಸ್ ಕನ್ನಡ ಸೀಸನ್-12 ಫಿನಾಲೆ ಕಾರ್ಯಕ್ರಮದಲ್ಲಿ ಈ ಬಾರಿ ಬದಲಾವಣೆ ಕಂಡುಬಂದಿದ್ದು, ಇಂದು ನಡೆಯಬೇಕಾಗಿದ್ದ ಫಿನಾಲೆಗೆ ಕಿಚ್ಚ ಸುದೀಪ್ ಗೈರಾಗುತ್ತಿದ್ದು, ಈ ಹಿನ್ನಲೆಯಲ್ಲಿ ಇಂದು ನಡೆಯಲಿದ್ದ ಫಿನಾಲೆಯನ್ನು ಕ್ಯಾನ್ಸಲ್ ಮಾಡಲಾಗಿದೆ.

ಹೌದು,  ಸಾಮಾನ್ಯವಾಗಿ ಎರಡು ದಿನ ನಡೆಯುತ್ತಿದ್ದ ಫಿನಾಲೆ ಈ ಬಾರಿ ಒಂದೇ ದಿನಕ್ಕೆ ಸೀಮಿತವಾಗಿದೆ. ಇದೇ ಮೊದಲ ಬಾರಿಗೆ ಸುದೀಪ್ ಅವರು ಬಿಗ್ ಬಾಸ್ ಫಿನಾಲೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಪ್ರತಿ ಬಾರಿ ಬಿಗ್ ಬಾಸ್ ಫಿನಾಲೆ ಎರಡು ದಿನ ನಡೆಯುತ್ತಿತ್ತು. ಆದರೆ, ಈ ಸೀಸನ್ ಅಲ್ಲಿ ಒಂದೇ ದಿನ ಫಿನಾಲೆ ನಡೆಯುವಂತೆ ಆಗಿದೆ. ಸುದೀಪ್ ಗೈರಾಗಲು ಕಾರಣವೂ ಇದೆ. 

ಜನವರಿ 16ರಂದು ‘ಪಂಜಾಬ್ ದೆ ಶೇರ್’ ವಿರುದ್ಧ ಮೊದಲ ಪಂದ್ಯವನ್ನಾಡಿರೋ ಕರ್ನಾಟಕ ಬುಲ್ಡೋಜರ್ ತಂಡ ಗೆಲುವು ಸಾಧಿಸಿದೆ. ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಈ ಪಂದ್ಯ ನಡೆದಿದೆ. ಆಟ ಮುಗಿದ ಬಳಿಕ ರಾತ್ರೋ ರಾತ್ರಿ ಬೆಂಗಳೂರಿಗೆ ಬಂದು ಬೆಳಿಗ್ಗೆ ಬಿಗ್ ಬಾಸ್ ನಡೆಸಿಕೊಡೋದು ಎಂದರೆ ಅದು ಅಸಾಧ್ಯವಾದ ಮಾತು. ಈ ಕಾರಣದಿಂದಲೇ ಒಂದು ದಿನ ಬಿಡುವು ಪಡೆದು ಸುದೀಪ್ ‘ಬಿಗ್ ಬಾಸ್ 12’ ಫಿನಾಲೆ ನಡೆಸಿಕೊಡುತ್ತಿದ್ದಾರೆ ಎಂದು ವರದಿ ಆಗಿದೆ. ಇಂದು ಪ್ರೀ ಫಿನಾಲೆ ಇರುತ್ತದೆ. ಅದಕ್ಕೆ ಸುದೀಪ್ ಬರುತ್ತಾರೆ ಎಂಬ ಮಾತುಗಳು ಕೇಳಲ್ಪಟ್ಟಿವೆ.

ಮೂಲಗಳ ಪ್ರಕಾರ, ಇಂದು (ಶನಿವಾರ) ಸಾಮಾನ್ಯ ಎಪಿಸೋಡ್ ಪ್ರಸಾರವಾಗಲಿದ್ದು, ವಿಶೇಷ ಡ್ಯಾನ್ಸ್ ಕಾರ್ಯಕ್ರಮಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ವೋಟಿಂಗ್‌ಗೆ ಭಾನುವಾರ ರಾತ್ರಿ 10 ಗಂಟೆವರೆಗೆ ಅವಕಾಶ ನೀಡಲಾಗಿದೆ. 

You may also like