4
ಕಡಿರುದ್ಯಾವರ: ಗ್ರಾಮದ ಹೇಡ್ಯ ಎಂಬಲ್ಲಿ ಜ.17 ರಂದು ಗಬ್ಬದ ದನವೊಂದು 30 ಅಡಿ ಆಳದ ಬಾವಿಗೆ ಬಿದ್ದ ಘಟನೆ ನಡೆದಿದೆ. ಗಂಗಯ್ಯ ಗೌಡ ಅವರಿಗೆ ಸೇರಿದ ದನ ಇದಾಗಿದೆ.
ಸ್ಕ್ರೈನ್ ಮೂಲಕ ದನವನ್ನು ಮೇಲಕ್ಕೆ ಎತ್ತಲು ಪ್ರಕಾಶ್ ಗೌಡ, ಮಹಮ್ಮದ್ ಶಾಪಿ, ಕರಿಯ, ಬಾಲಚಂದ್ರ ನಾಯಕ್, ಸೈಯದ್ ಮತ್ತು ಶೇಖರ್ ಸಹಕಾರ ನೀಡಿದರು.
ಗಬ್ಬದ ದನ ಆಳಕ್ಕೆ ಬಿದ್ದ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಪರಿಣಾಮ, ಪಶು ವೈದ್ಯಾಧಿಕಾರಿ ಸ್ಥಳಕ್ಕೆ ಆಗಮಿಸಿ ಚಿಕಿತ್ಸೆ ನೀಡಿದ್ದಾರೆ.
