Home » Bigg boss: ಬಿಗ್‌ ಬಾಸ್‌ ಸ್ಪರ್ಧಿಗಳ ಪರ ರಾಜಕೀಯ ನಾಯಕರ ಮತಯಾಚನೆ: ಯಾರಿಗೆ ಯಾರ ಬೆಂಬಲ?

Bigg boss: ಬಿಗ್‌ ಬಾಸ್‌ ಸ್ಪರ್ಧಿಗಳ ಪರ ರಾಜಕೀಯ ನಾಯಕರ ಮತಯಾಚನೆ: ಯಾರಿಗೆ ಯಾರ ಬೆಂಬಲ?

0 comments

   Bigg boss: ಬಿಗ್‌ಬಾಸ್ ಫಿನಾಲೆಗೆ (Bigg Boss Grand Finale) ಕೌಂಟ್‌ಡೌನ್ ಶುರುವಾಗಿದೆ. ಭಾನುವಾರ ಫಿನಾಲೆ ನಡೆಯಲಿದ್ದು ಮನೆ ಪ್ರವೇಶಿಸಿದ್ದ 22 ಮಂದಿಯಲ್ಲಿ ಈಗ ಧನುಷ್‌, ರಕ್ಷಿತಾ, ಗಿಲ್ಲಿ, ಅಶ್ವಿನಿ, ರಘು, ಕಾವ್ಯ ಈಗ ಉಳಿದಿದ್ದು ರಾಜಕೀಯ ನಾಯಕರೇ ಅಖಾಡಕ್ಕಿಳಿದು ತಮ್ಮ-ತಮ್ಮ ಕ್ಷೇತ್ರದ ಸ್ಪರ್ಧಿಗಳ ಪರವಾಗಿ ಬ್ಯಾಟ್ ಬೀಸಲು ಆರಂಭಿಸಿದ್ದಾರೆ.

ಶಾಸಕರು, ಮಾಜಿ ಸಚಿವರುಗಳಿಂದಲೂ ಈಗ ವೋಟ್‌ಪಾಲಿಟಿಕ್ಸ್ ಶುರುವಾಗಿದ್ದು ಸೋಷಿಯಲ್ ಮೀಡಿಯದಲ್ಲಿ ಅಭಿಮಾನಿಗಳಿಗೆ ವೋಟು ಕೊಟ್ಟು ಗೆಲ್ಲಿಸುವಂತೆ ಮತ ಬೇಟೆಯಾಡುತ್ತಿದ್ದಾರೆ.  

 ಯಾರ ಪರ ಯಾರು?

ಗಿಲ್ಲಿ ನಟ (Gilli Nata) ಪರವಾಗಿ ಮಳವಳ್ಳಿಯ ಶಾಸಕ ನರೇಂದ್ರ ಸ್ವಾಮಿ, ಮಾಜಿ ಸಚಿವ ಡಿಸಿ ತಮ್ಮಣ್ಣ ಬೆಂಬಲ ವ್ಯಕ್ತಪಡಿಸಿದರೆ ಕರಾವಳಿಯ ರಕ್ಷಿತಾ ಶೆಟ್ಟಿ (Rakshita Shetty) ಪರ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಮತಯಾಚನೆ ಮಾಡಿದ್ದಾರೆ.

ಕಾವ್ಯಾ (Kavya) ಪರವಾಗಿ ಕೆಆರ್‌ ಪೇಟೆಯ ಹೆಚ್‌ಟಿ ಮಂಜು, ಮಾಜಿ ಸಚಿವ ಕೆ.ಸಿ ನಾರಾಯಣ ಗೌಡ ಬ್ಯಾಟ್‌ ಬೀಸಿದ್ದಾರೆ. ರಘು (Raghu) ಪರವಾಗಿ ಮಾಜಿ ಸಚಿವ ಬಿಸಿ ಪಾಟೀಲ್‌ ಮತಯಾಚನೆ ಮಾಡಿ ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.

You may also like