ಬೆಳ್ತಂಗಡಿ: ವಿದ್ಯಾರ್ಥಿಗಳು ತಮ್ಮನ್ನು ತಾವು ಕಲಿಕೆಯೊಂದಿಗೆ ಇತರ ಚಟುವಟಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಸಾಧನೆಯ ಶಿಖರವನ್ನು ಏರಲು ಸಾಧ್ಯ. ಇಂದು ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಅಂತಹ ಸಾಧನೆಯನ್ನು ಮಾಡಿ ಸಂಸ್ಥೆಗೆ ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ನಿರಂಜನ್ ಜೈನ್ ಐ. ಅವರು ಮಕ್ಕಳಿಗೆ ಪ್ರಶಂಸನ ಪತ್ರ ನೀಡಿ ಶುಭ ಹಾರೈಸಿದರು.
ಕರ್ನಾಟಕ ಸರ್ಕಾರದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬೆಂಗಳೂರು ಅವರು ನಡೆಸುವ ರಾಜ್ಯಮಟ್ಟದ ಪರೀಕ್ಷೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಸಂಸ್ಥೆಯಿಂದ 33 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಶೇ.100 ಫಲಿತಾಂಶದೊಂದಿಗೆ ಶಾಲೆಗೆ ಕೀರ್ತಿ ತಂದಿದ್ದಾರೆ. ಇದರಲ್ಲಿ 17 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 16 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಅವರಿಗೆ ಸೂಕ್ತ ಸಲಹೆ ಸೂಚನೆ ಹಾಗೂ ತರಬೇತಿ ನೀಡಿದ ಸದಾನಂದ ಬಿರಾದಾರ್ ಚಿತ್ರಕಲಾ ಶಿಕ್ಷಕರನ್ನು ಸ್ನೇಹದಿಂದ ಪ್ರೋತ್ಸಾಹಿಸಲಾಯಿತು. Kps ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಉಪಪ್ರಾಂಶುಪಾಲರು ಹಾಗೂ ಸಿಬ್ಬಂದಿಗಳು ಅಭಿನಂದಿಸಿ ಗೌರವಿಸಿದರು.
ಲೋಹರ್ ಗ್ರೇಡ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆದವರು: ದೀಕ್ಷಿತ್ ಡಿ.(417), ಹರ್ಷಿತ (414), ಸುಶೃತ್ ಶರ್ಮ (409), ಪ್ರಣಮ್ (398), ಶಿವಾನಂದ್ ಲಕ್ಕಪ್ಪ ಸೂರಣ್ಣನವರ 377, ಮೇಘಶ್ರೀ 396, ದಿಶಾನ್ 379, ವೈಷ್ಣವಿ 364
ಅತ್ಯುನತ ಶ್ರೇಣಿ: ಮಾನ್ವಿ ಎಂ. 482, ಅಂಕಿತ 481, ನೈಮಾಬಾನು 427, ಶ್ರದ್ದಾ 427, ಅನನ್ಯ 430, ಸಾನಿಕ 430, ಚೇತನ್ 420.
ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಫಲಿತಾಂಶ ಪಡೆದವರು: ಜಯರಾಮ 414, ಸಿಂಚನ 412, ರಕ್ಷಿತಾ 406, ಸೃಷ್ಟಿ 404, ಲಿಖಿತ 395, ಪಲ್ಲವಿ 392, ತೃಷಾ ಶೆಟ್ಟಿ 394.
ಅತ್ಯುನ್ನತ ಶ್ರೇಣಿ: ಪ್ರೀತಮ್ 472, ಭುವನೇಶ್ 466,
ಭೂಷಣ್ 465, ಶಶಾಂಕ್ 449, ಪ್ರಜ್ಞಾ 448, ಚಿತ್ರಾ 439, ವೀಕ್ಷಿತಾ 439, ಶಿಯಾ 435, ರೇಖಾ 427 ಮತ್ತು ನಯನ 425.
