5

Sleeper train: ದೇಶದ ಮೊದಲ ವಂದೇ ಭಾರತ್ ಎಸಿ ಸ್ಲೀಪರ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪಶ್ಚಿಮಬಂಗಾಳದಲ್ಲಿ ಚಾಲನೆ ನೀಡಿದರು.

ಹೊಸ ತಲೆಮಾರಿನ ರೈಲಾದ ವಂದೇ ಭಾರತ್ನ ಮೊದಲ ಸ್ಲೀಪರ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿನ ಮಾಲ್ಡಾ ಟೌನ್ ನಿಲ್ದಾಣದಲ್ಲಿ ಇಂದು (ಶನಿವಾರ) ಹಸಿರು ನಿಶಾನೆ ತೋರಿಸಿದರು.
ವಂದೇ ಭಾರತ್ ಆವೃತ್ತಿಯ ರೈಲುಗಳ ಮೊದಲ ಸ್ಲೀಪರ್ ರೈಲು ಇದಾಗಿದ್ದು, ಅಸ್ಸೋಂನ ಗುವಾಹಟಿ ಮತ್ತು ಬಂಗಾಳದ ರಾಜಧಾನಿ ಕೋಲ್ಕತ್ತಾದ ನಡುವೆ ಸಂಚರಿಸಲಿದೆ. ರೈಲಿಗೆ ಚಾಲನೆ ನೀಡಿದ ಬಳಿಕ, ಅದರಲ್ಲಿಯೇ ಮಕ್ಕಳು ಮತ್ತು ಶಾಲಾ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಸಂವಾದ ನಡೆಸಿದರು. ಬಳಿಕ ಲೋಕೋ ಪೈಲಟ್ಗಳ ಜೊತೆಗೂ ಮಾತುಕತೆ ಮಾಡಿದರು.
ಈ ಎಸಿ ಸ್ಲೀಪರ್ ರೈಲು ಬಂಗಾಳದ ಹೌರಾ ಮತ್ತು ಅಸ್ಸೋಂನ ಗುವಾಹಟಿ ಮಾರ್ಗ ಪ್ರಯಾಣವನ್ನು ಸುಮಾರು 2.5 ಗಂಟೆಗಳಷ್ಟು ಕಡಿಮೆ ಮಾಡಲಿದೆ. ಇದು ಧಾರ್ಮಿಕ ಮತ್ತು ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
