
BBK-12: ಬಿಗ್ ಬಾಸ್ ಸ್ಪರ್ಧಿ ಆಗಿರುವ ಗಿಲ್ಲಿ ನಟ ಹೊರಗಡೆ ತನ್ನದೇ ಆದ ಹೊಸ ಕ್ರೇಜ್ ಸೃಷ್ಟಿಸುತ್ತಿದ್ದಾರೆ. ಅವರಿಗೆ ಗೊತ್ತಿಲ್ಲದಂತೆ ಹೊರ ಪ್ರಪಂಚದಲ್ಲಿ ಸಾಕಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಬಿಗ್ ಬಾಸ್ ವಿನ್ನರ್ ಅವರೇ ಆಗಬೇಕೆಂದು ಅನೇಕರು ಆಸೆಪಟ್ಟು ಸೋಶಿಯಲ್ ಮೀಡಿಯಾದಲ್ಲಿ ಪ್ರಮೋಷನ್ ಕೂಡ ಮಾಡುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಗಿಲ್ಲಿ ಪರ ವೋಟ್ ಕೇಳುತ್ತಿದ್ದಾರೆ. ಈ ನಡುವೆ ಗಿಲ್ಲಿ ಅವರು ಬಿಗ್ ಬಾಸ್ಗೆ ಬರಲು ಕಾರಣ ಯಾರು ಎಂಬುದನ್ನು ರಿವೀಲ್ ಮಾಡಿದ್ದಾರೆ.

ಗಿಲ್ಲಿ ನಟ ಅವರು ಜೀ ಕನ್ನಡದಲ್ಲಿ ಶೋಗಳನ್ನು ನೀಡುತ್ತಾ ಬಂದವರು. ಅವರು ಮೊದಲ ಬಾರಿಗೆ ಕಲರ್ಸ್ನಲ್ಲಿ ಕಾಣಿಸಿಕೊಂಡಿದ್ದು ‘ಕ್ವಾಟ್ಲೆ ಕಿಚನ್’ ಶೋನಲ್ಲಿ. ಇದರಲ್ಲಿ ಅವರು ಹೆಚ್ಚು ದಿನ ಇರಲಿಲ್ಲ. ಆ ಬಳಿಕ ಗಿಲ್ಲಿ ನಟ ಅವರು ‘ಬಿಗ್ ಬಾಸ್’ ಶೋಗೆ ಬಂದು ಗಮನ ಸೆಳೆದರು. ಅವರು ಅದ್ಭುತವಾಗಿ ಮನರಂಜನೆ ನೀಡುವ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಈಗ ಅವರು ಇಲ್ಲಿಗೆ ಬರಲು ಕಾರಣ ತುಕಾಲಿ ಸಂತೋಷ್ ಎಂಬ ವಿಷಯ ಗೊತ್ತಾಗಿದೆ. ಇದೀಗ ಅವರು ಬಿಗ್ ಬಾಸ್ನ ಮಾಜಿ ಸ್ಪರ್ಧಿ ತುಕಾಲಿ ಸಂತೋಷ್ ಅವರಿಗೆ ಧನ್ಯವಾದ ಹೇಳಿದ್ದಾರೆ.
ಹೊಸದಾಗಿ ಆರಂಭವಾಗಲಿರುವ ಗಿಚ್ಚ ಗಿಲಗಿಲಿ ತಂಡ ಬಿಗ್ ಬಾಸ್ ಮನೆಗೆ ಬಂದಿತ್ತು. ತುಕಾಲಿ ಸಂತೋಷ್ ಅವರು ‘ಗಿಚ್ಚಿ ಗಿಲಿಗಿಲಿ’ ತಂಡದಲ್ಲಿ ಇದ್ದಾರೆ. ಈ ವೇಳೆ ಇಷ್ಟದ ಸ್ಪರ್ಧಿ ಯಾರು ಎಂಬುದನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಗಿಲ್ಲಿ, ಹಲವರ ಹೆಸರನ್ನು ಹೇಳಿದರು. ಆದರೆ, ತುಕಾಲಿ ಹೆಸರನ್ನು ಅವರು ಉಲ್ಲೇಖ ಮಾಡಿಲ್ಲ. ಆಗ ತುಕಾಲಿ ಸಂತು ಅವರು, ‘ನನ್ನ ಹೆಸರನ್ನು ಹೇಳ್ತೀಯಾ ಎಂದು ಕಾಯ್ತಾ ಇದ್ದೆ’ ಎಂದರು. ‘ನಿನ್ನನ್ನು ಮರೆಯೋಕೆ ಹೇಗೆ ಸಾಧ್ಯ? ಈ ಶೋಗೆ ಬರೋಕೆ ನೀನು ಕಾರಣ. ಮರೆತು ಬಿಟ್ಟೆಯಾ? ಅಣ್ಣನೇ ಸಂಧಾನ ಮಾಡ್ಸಿದ್ದು’ ಎಂದು ಗಿಲ್ಲಿ ಹೇಳಿದರು. ಏನು ಸಂಧಾನ ಎಂಬಿತ್ಯಾದಿ ವಿಷಯವನ್ನು ಉಲ್ಲೇಖಿಸಿಲ್ಲ.
