Home » Bigg boss: ಬಿಗ್ ಬಾಸ್ 12 ಗೆಲ್ಲೋದು ಗಿಲ್ಲಿ ನಟ: ಮಾತು ಸುಳ್ಳಾದರೆ 1 ಏಕರೆ ಕೊಡ್ತೀನಿ ಓಪನ್ ಚಾಲೆಂಜ್ ಎಂದ ರೈತ

Bigg boss: ಬಿಗ್ ಬಾಸ್ 12 ಗೆಲ್ಲೋದು ಗಿಲ್ಲಿ ನಟ: ಮಾತು ಸುಳ್ಳಾದರೆ 1 ಏಕರೆ ಕೊಡ್ತೀನಿ ಓಪನ್ ಚಾಲೆಂಜ್ ಎಂದ ರೈತ

A+A-
Reset

Bigg boss: ಬಿಗ್ ಬಾಸ್ ಕನ್ನಡ 12ನೇ ಆವೃತ್ತಿ ಯಲ್ಲಿ ಗಿಲ್ಲಿ ನಟ ಬಿಗ್ ಬಾಸ್ ವಿನ್ನರ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಲಾಗುತ್ತಿದೆ. ಇತ್ತ ಸ್ಪರ್ಧಿಗಳ ಅಭಿಮಾನಿಗಳು ದೇವಸ್ಥಾನಗಳಲ್ಲಿ ಗೆಲುವಿಗಾಗಿ ಪೂಜೆ, ಅನ್ನದಾನ ಸೇರಿದಂತೆ ಹಲವು ಕಾರ್ಯಗಳಲ್ಲಿ ತೊಡಗಿದ್ದಾರೆ. ಇದೇ ವೇಳೆ ರೈತನೊಬ್ಬ ಈ ಬಾರಿಯ ಬಿಗ್ ಬಾಸ್ 12ನೇ ಆವೃತ್ತಿಯನ್ನು ಗಿಲ್ಲಿ ನಟ ಗೆದ್ದೇ ಗೆಲ್ಲುತ್ತಾನೆ. ಚಾಲೆಂಜ್ ಇದೆಯಾ ಎಂದು ಸವಾಲು ಹಾಕಿದ್ದಾರೆ. ಯಾವನಾದ್ರೂ ಇದ್ರೆ ಕರೆದುಕೊಂಡು ಬನ್ನಿ, ನನ್ನ ಜೊತೆ ಚಾಲೆಂಜ್ ಮಾಡಲಿ, ಈ ಬಾರಿ ಗಿಲ್ಲಿ ಗೆದ್ದೆ ಗೆಲ್ಲುತ್ತಾನೆ. 1 ಏಕರೆ ಜಮೀನು ಜಾಲೆಂಜ್ ಎಂದಿದ್ದಾರೆ.

ತಮ್ಮ ಜಮೀನಿನ 1 ಏಕರೆ ಚಾಲೆಂಜ್‌ಗೆ ಇಟ್ಟ ರೈತ: ಮಂಡ್ಯದ ರೈತನೊಬ್ಬನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬಿಗ್ ಬಾಸ್ ಗೆಲುವಿನ ಕುರಿತು ಮಾತನಾಡಿದ ರೈತ, ಈ ಬಾರಿ ಗೆಲುವಿನಲ್ಲಿ ಯಾವುದೇ ಅನುಮಾನವಿಲ್ಲ. ಗಿಲ್ಲಿ ನಟ ಗೆಲ್ಲುತ್ತಾನೆ. ನನ್ನ ಮಾತು ಸುಳ್ಳಾದರೆ ಒಂದು ಏಕರೆ ಬರೆದುಕೊಡುತ್ತೇನೆ ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ.

ರೈತ ಬಳಿ ವ್ಯಕ್ತಿಯೊಬ್ಬರು ಈ ಬಾರಿ ಅಶ್ವಿನಿ ಗೌಡ ಬಿಗ್ ಬಾಸ್ ವಿನ್ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರೈತ, ಸಾಧ್ಯವೇ ಇಲ್ಲ. ಈ ಬಾರಿ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ. ಇವತ್ತು ಸಂಜೆ 5 ಗಂಟೆ ಒಳಗೆ ನನ್ನ ಮಾತಿಗೆ ಚಾಲೆಂಜ್ ಹಾಕುವವರು ಯಾರಾದರೂ ಇದ್ದರೆ ಕರೆದುಕೊಂಡು ಬಾ, ಮಾತು ಸುಳ್ಳಾದರೆ 1 ಏಕರೆ ಜಮೀನು ಬರೆದುಕೊಡುತ್ತೇನೆ. ಚಾಲೆಂಜ್ ಸ್ವೀಕರಿಸಲು ಯಾರದರು ಇದ್ದೀರಾ ಎಂದು ರೈತ ಸವಾಲು ಹಾಕಿದ್ದಾನೆ.