5

Lakkundi: ಲಕ್ಕುಂಡಿಯಲ್ಲಿ ಮನೆಯ ಭಯ ನೋಡುವ ಸಂದರ್ಭದಲ್ಲಿ ಸುಮಾರು 400 ಗ್ರಾಂ ನಷ್ಟು ಚಿನ್ನದ ನಿಧಿ ಸಿಕ್ಕಿದ ಬೆನ್ನಲ್ಲೇ ಈಗ ರಾಜ್ಯ ಸರ್ಕಾರವು ಲಕ್ಕುಂಡಿಯಲ್ಲಿ ಉತ್ಖನ ಕಾರ್ಯ ಆರಂಭಿಸಿದೆ. ಈ ಸಂದರ್ಭದಲ್ಲಿ ಪುರಾತನ ಶಿವಲಿಂಗ ಒಂದು ಪತ್ತೆಯಾಗಿದೆ.

ಹೌದು, ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ ಮುಂದುವರಿದಿದ್ದು, ಈ ಸಂದರ್ಭದಲ್ಲಿಯೇ ಲಕ್ಕುಂಡಿಯಲ್ಲಿನ ಕೋಟೆ ಗೋಡೆಯ ಪಕ್ಕದಲ್ಲಿದ್ದ ಶಾಲಾ ಕಟ್ಟಡವನ್ನು ಕೆಡವುವಾಗ ಅಲ್ಲಿ ಪುರಾತನ ಕಾಲದ ಶಿವಲಿಂಗವೊಂದು ಪತ್ತೆಯಾಗಿದೆ.
ಸಂಪೂರ್ಣವಾಗಿ ಡೆಮಾಲಿಶ್ ಮಾಡಿದ ಶಾಲೆಯ ಗೋಡೆಯ ಭಾಗದಲ್ಲಿ ಗ್ರಾಮಸ್ಥರ ಕಣ್ಣಿಗೆ ಈ ಶಿವಲಿಂಗ ಮೊದಲು ಬಿದ್ದಿದೆ. ಈ ಲಿಂಗವು ಬಹಳ ಹಳೆಯ ಕಾಲದ್ದಾಗಿರಬಹುದು ಎಂದು ಸ್ಥಳೀಯರು ಊಹಿಸಿದ್ದಾರೆ. ಪುರಾತತ್ವ ಇಲಾಖೆಯು ಈ ಲಿಂಗದ ಕುರಿತು ಪರಿಶೀಲನೆ ನಡೆಸುತ್ತಿದ್ದು, ಇದು ಯಾವ ಕಾಲಮಾನಕ್ಕೆ ಸೇರಿದ್ದು ಎಂಬ ಬಗ್ಗೆ ಸ್ಪಷ್ಟಪಡಿಸಬೇಕಿದೆ.
