Vande Bharat Sleeper ಪ್ರಧಾನಿ ನರೇಂದ್ರ ಮೋದಿ ಇಂದು ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಹಸಿರು ನಿಶಾನೆ ತೋರಿದ್ದಾರೆ. ಈ ವಂದೇ ಭಾರತ್ ಸ್ಲೀಪರ್ ರೈಲು ಹೌರಾ ಮತ್ತು ಕಾಮಾಕ್ಯದ ನಡುವೆ ಸಂಚರಿಸಲಿದೆ. ಇದು ಭಾರತದ ಅಭಿವೃದ್ಧಿಯ ಸಂಕೇತಗಳಿಗೆ ಹಿಡಿದ ಕೈಗನ್ನಡಿಯಾಗಿದೆ. ಈಗಾಗಲೇ ವಂದೇ ಭಾರತ್ ಸ್ಲೀಪರ್ ರೈಲುಗಳ ವಿಶೇಷತೆ, ಟಿಕೆಟ್ ದರದ ಬಗ್ಗೆ ತಿಳಿದುಕೊಂಡಿದ್ದೆವು. ಇದೀಗ ಒಂದು ವೇಳೆ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಅಮೌಂಟ್ ರಿಫಂಡ್ ಆಗುತ್ತಾ ಎಂಬ ವಿಚಾರ ಚರ್ಚೆಯಾಗುತ್ತಿದೆ.
ಹೌದು, ಪ್ರಸ್ತುತ, ಈ ರೈಲಿಗೆ ಮೋದಿಯವರು ಹಸಿರು ನಿಶಾನೆ ತೋರಿಸಿದಾಗಿನಿಂದ ಪ್ರಯಾಣಿಕರಲ್ಲಿ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಅದರಲ್ಲೂ ಟಿಕೆಟ್ ಬುಕ್ ಮಾಡಿದ ನಂತರ ಒಂದು ಟಿಕೆಟ್ ರದ್ದು ಮಾಡಿದರೆ ಹಣ ಮರುಪಾವತಿಯಾಗುತ್ತಾ ಎಂಬುದು ಸಾಮಾನ್ಯ ಗೊಂದಲ. ಇದೀಗ ಈ ಗೊಂದಲಕ್ಕೆ ರೈಲ್ವೆ ಇಲಾಖೆ ಸ್ಪಷ್ಟೀಕರಣ ನೀಡಿದೆ.
ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಟಿಕೆಟ್ ಏನಾದರೂ ಕ್ಯಾನ್ಸಲ್ ಮಾಡಿದರೆ ಅಮೌಂಟ್ ಮರುಪಾವತಿ ಆಗುವುದು ಖಂಡಿತ. ಆದರೆ ವಂದೇ ಭಾರತ್ ಸ್ಲೀಪರ್ ರೈಲಿನ ರದ್ದತಿ ಮತ್ತು ಮರುಪಾವತಿ ನಿಯಮಗಳು ಸಾಮಾನ್ಯ ರೈಲುಗಳಿಗಿಂತ ತುಂಬಾನೇ ಕಠಿಣ ಎಂದು ಹೇಳಲಾಗುತ್ತಿದೆ. ರೈಲು ಹೊರಡುವ ಸಮಯಕ್ಕೆ ಎಷ್ಟು ಗಂಟೆಗಳ ಮೊದಲು ಟಿಕೆಟ್ ರದ್ದುಗೊಳಿಸಲಾಗಿದೆ ಎಂಬುದರ ಮೇಲೆ ಮರುಪಾವತಿ ಮೊತ್ತವು ನಿರ್ಧಾರವಾಗುತ್ತದೆ. ರೈಲ್ವೆ ಇಲಾಖೆಯು ಈ ರೈಲಿಗಾಗಿ ಮೂರು ಪ್ರಮುಖ ಸಮಯದ ಸ್ಲಾಟ್‌ಗಳನ್ನು ಪ್ರಕಟಿಸಿದೆ. ಈ ಅವಧಿಗಳ ಆಧಾರದ ಮೇಲೆ ಮರುಪಾವತಿ ಮೊತ್ತ ರೈಲ್ವೇ ಇಲಾಖೆ ನಿರ್ಧಾರ ಮಾಡುತ್ತದೆ. ಟಿಕೆಟ್ ರದ್ದುಗೊಳಿಸುವಲ್ಲಿ ವಿಳಂಬ ಮಾಡಿದರೆ, ಹೆಚ್ಚು ಶುಲ್ಕ ಕಡಿತವಾಗುತ್ತದೆ. ಆದ್ದರಿಂದ ಮುಂಚಿತವಾಗಿಯೇ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಆದ್ದರಿಂದ ರೈಲು ಹೊರಡುವ 72 ಗಂಟೆಗಳಿಂದ 8 ಗಂಟೆಗಳ ನಡುವೆ ಟಿಕೆಟ್ ರದ್ದುಗೊಳಿಸಿದರೆ, ಮರುಪಾವತಿ ಮೊತ್ತ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಈ ಅವಧಿಯಲ್ಲಿ ರದ್ದುಪಡಿಸಿದರೆ, ಟಿಕೆಟ್‌ನ ಒಟ್ಟು ಶುಲ್ಕದಲ್ಲಿ 50% ಕಡಿತಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ. ಅಂದರೆ ಕೇವಲ 50% ಹಣ ಮಾತ್ರ ಪಾವತಿಯಾಗುತ್ತದೆ.
ರೈಲಿನ ಟಿಕೆಟ್ ಬೆಲೆ:
ಹೌರಾ ಮತ್ತು ಕಾಮಾಕ್ಯ ನಡುವಿನ ವಂದೇ ಭಾರತ್ ಸ್ಲೀಪರ್ ರೈಲಿನ 3ನೇ ಎಸಿ ಟಿಕೆಟ್‌ನ ಬೆಲೆ ಸುಮಾರು 2,300 ರೂ. ಆಗಿರುತ್ತದೆ. 2ನೇ ಎಸಿ ಟಿಕೆಟ್ ದರ ಸುಮಾರು 3,000 ರೂ. ಮತ್ತು 1ನೇ ಎಸಿ ಟಿಕೆಟ್‌ನ ಬೆಲೆ ಸುಮಾರು 3,600 ರೂ. ಇರಲಿದೆ. ಈ ರೈಲು ಗಂಟೆಗೆ 180 ಕಿ.ಮೀ. ವೇಗವನ್ನು ತಲುಪಲು ನಿರ್ಮಿಸಲಾಗಿದ್ದರೂ, ಇದು ಗಂಟೆಗೆ ಗರಿಷ್ಠ 120-130 ಕಿ.ಮೀ. ವೇಗದಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.



