Home News Davanagere: ಆನಗೋಡು ಕಿರು ಮೃಗಾಲಯದಲ್ಲಿ 4 ಚುಕ್ಕಿ ಜಿಂಕೆಗಳ ನಿಗೂಢ ಸಾವು!

Davanagere: ಆನಗೋಡು ಕಿರು ಮೃಗಾಲಯದಲ್ಲಿ 4 ಚುಕ್ಕಿ ಜಿಂಕೆಗಳ ನಿಗೂಢ ಸಾವು!

  Davanagere: ಚುಕ್ಕಿ ಜಿಂಕೆಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ (Davanagere) ಜಿಲ್ಲೆಯ ಆನಗೋಡು (Anagodu) ಗ್ರಾಮದ ಬಳಿ ಇರುವ ಇಂದಿರಾ ಪ್ರಿಯದರ್ಶಿನಿ (Indira Priyadarshini) ಕಿರು ಮೃಗಾಲಯದಲ್ಲಿ ನಡೆದಿದೆ.

ಕಳೆದ ಮೂರೇ ದಿನದಲ್ಲಿ ನಾಲ್ಕು ಚುಕ್ಕಿ ಜಿಂಕೆಗಳು ಸಾವನ್ನಪ್ಪಿದ್ದು, ಮೃಗಾಯಲದಲ್ಲಿ ಹೆಮರಾಜಿಕ್ ಸೆಫ್ಟಿಸೆಮಿಯಾ ಎಂಬ ಸಾಂಕ್ರಾಮಿಕ ರೋಗ ಹರಡಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ. 

ಮೃಗಾಲಯದಲ್ಲಿ ಸದ್ಯ 170 ಚುಕ್ಕೆ ಜಿಂಕೆಗಳಿದ್ದು, ಅವುಗಳನ್ನು ಉಳಿಸಿಕೊಳ್ಳಲು ವೈದ್ಯರು ರೋಗನಿರೋಧಕ ಚಿಕಿತ್ಸೆ ಆರಂಭಿಸಿದ್ದಾರೆ. ಇನ್ನೂ ಚಿಕಿತ್ಸೆ ನಡೆಯುತ್ತಿರುವ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ತಾತ್ಕಾಲಿಕವಾಗಿ ಸಾರ್ವಜನಿಕರ ವೀಕ್ಷಣೆಗೆ ನಿರ್ಬಂಧ ಹೇರಿದ್ದಾರೆ.