Home News ನೊಬೆಲ್ ಶಾಂತಿ ಪ್ರಶಸ್ತಿ ಸಿಗದ ನಾನೇಕೆ ಶಾಂತಿಗೆ ಯತ್ನಿಸಲಿ?-ಟ್ರಂಪ್‌

ನೊಬೆಲ್ ಶಾಂತಿ ಪ್ರಶಸ್ತಿ ಸಿಗದ ನಾನೇಕೆ ಶಾಂತಿಗೆ ಯತ್ನಿಸಲಿ?-ಟ್ರಂಪ್‌

Donald Trump

ವಾಷಿಂಗ್ಟನ್: ನೊಬೆಲ್ ಶಾಂತಿ ಪ್ರಶಸ್ತಿ ಸಿಗದ ಹತಾಶೆಯಲ್ಲಿ ನಾರ್ವೆ ಪ್ರಧಾನಿ ಜೋನಸ್ ಗಹರ್ ಸ್ಟೋರ್‌ಗೆ ಪತ್ರ ಬರೆದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ನಿಮ್ಮ ನಿಲುವು ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳುವ ನಮ್ಮ ಯೋಜನೆಗೆ ಸಹಕಾರಿಯಾಗಿದೆ,” ಎಂದು ವ್ಯಂಗ್ಯವಾಡಿದ್ದಾರೆ.

“ಶಾಂತಿ ಪ್ರಶಸ್ತಿ ನಿರಾಕರಿಸಿದ ನಿಮ್ಮ (ಶಾಂತಿ ಪ್ರಶಸ್ತಿ ಸಮಿತಿ) ನಿಲುವು ಜಾಗತಿಕ ವ್ಯವಹಾರಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ನನಗೆ ಅರ್ಥ ಮಾಡಿಸಿದೆ. ಎಂಟು ಯುದ್ಧ ನಿಲ್ಲಿಸಿದ ನನ್ನನ್ನು ಕಡೆಗಣಿಸಿದ ನಿಮ್ಮ ಪ್ರಶಸ್ತಿ ಸಮಿತಿ ನಿಯಮಗಳು ಜಗತ್ತಿನ ಶಾಂತಿಯ ಬಗ್ಗೆ ಯೋಚಿಸದಂತೆ ಮಾಡಿವೆ. ಇನ್ನು ಮುಂದೆ ಶಾಂತಿಮಂತ್ರ ಪಠಿಸುವ ಬಾಧ್ಯತೆ ನನಗಿಲ್ಲವೆಂದು ಭಾವಿಸುವೆ,” ಎಂದು ಪತ್ರದಲ್ಲಿ ಹೇಳಿದ್ದಾರೆ.