ಶ್ರೀವನಶಾಸ್ತಾರ ಮತ್ತು ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ ಆಡಳಿತ ಸೇವಾ ಸಮಿತಿ ಟ್ರಸ್ಟ್ ಕಾರಿಂಜ ಉರುವಾಲು ಗ್ರಾಮ ಬೆಳ್ತಂಗಡಿ ತಾಲೂಕು ಇದರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾದಿಕಾರಿಗಳಾದ ಡಾ!! ಡಿ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ ರೂ 2,50,000 ಮೊತ್ತದ ಡಿ .ಡಿ ಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ.ಟ್ರಸ್ಟ್ ( ರಿ) ಗುರುವಾಯನಕೆರೆ ಯೋಜನಾ ಕಚೇರಿಯ ಯೋಜನಾಧಿಕಾರಿಗಳಾದ ಅಶೋಕ್ ರವರು ದೇವಸ್ಥಾನದ ಅಡಳಿತ ಕಮಿಟಿ ಹಾಗೂ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಮಿಟಿಯ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅದ್ಯಕ್ಷರು ಹಾಗೂ ಸರ್ವಪದಾದಿಕಾರಿಗಳ ಸಮಕ್ಷಮದಲ್ಲಿ ಹಸ್ತಾಂತರ ಮಾಡಿದರು.
ಈ ಸಂದರ್ಭ ಕಣಿಯೂರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಲಯ ಮೇಲ್ವಿಚಾರಕರಾದ ಶಿಲ್ಪಾ ನಾಯಕ್ ರವರು ಉಪಸ್ಥಿತರಿದ್ದರು. ಸಮಿತಿಯ ಅದ್ಯಕ್ಷರುಗಳು ಪದಾದಿಕಾರಿಗಳು ಊರ ಭಕ್ತರು ಉಪಸ್ಥಿತರಿದ್ದರು .












