Home News Swing collapsed: ಮುರಿದು ಬಿದ್ದ ದೈತ್ಯ ಉಯ್ಯಾಲೆ!

Swing collapsed: ಮುರಿದು ಬಿದ್ದ ದೈತ್ಯ ಉಯ್ಯಾಲೆ!

  Swing collapsed: ಝಬುವಾ ಪಟ್ಟಣದಲ್ಲಿ ನಡೆಯುತ್ತಿರುವ ಜಾತ್ರೆಯಲ್ಲಿ ದೈತ್ಯ ಉಯ್ಯಾಲೆಯೊಂದು ಇದ್ದಕ್ಕಿದ್ದಂತೆ ಕುಸಿದುಬಿದ್ದಿದೆ. ಪರಿಣಾಮ ಒಂದು ಡಜನ್‌ಗೂ ಹೆಚ್ಚು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿ ಜಾಲತಾಣದಲ್ಲಿ ವೈರಲ್​ ಆಗಿದೆ.

ಉಯ್ಯಾಲೆ ಇದ್ದಕ್ಕಿದ್ದಂತೆ ಮುರಿದು ಬೀಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ 13 ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ಝಬುವಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಬಾಲಕಿಯರಿಗೆ ತೀವ್ರ ಗಾಯಗಳಾಗಿರುವುದರಿಂದ ಅವರನ್ನು ನಿಗಾದಲ್ಲಿ ಇರಿಸಲಾಗಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಝಬುವಾದ ಉತ್ಕೃಷ್ಟ ಮೈದಾನದಲ್ಲಿ “ಮಹಾರಾಜ್ ನೋ ಮೇಲೋ” ಹಮ್ಮಿಕೊಳ್ಳಲಾಗಿದ್ದು, ಈ ಜಾತ್ರೆ ಕಣ್ತುಂಬಿಕೊಳ್ಳಲೆಂದು ಭಾರಿ ಜನಸ್ತೋಮ ಸೇರಿದೆ. 20 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಬಗೆ ಬಗೆಯ ಉಯ್ಯಾಲೆಗಳು ಆಗಮಿಸಿದ್ದು, ಮಕ್ಕಳು, ಮಹಿಳೆಯರನ್ನು ಆಕರ್ಷಿಸುತ್ತಿವೆ. ಸೋಮವಾರ ಸಂಜೆ, ವಿದ್ಯಾರ್ಥಿಗಳನ್ನು ತುಂಬಿಕೊಂಡಿದ್ದ ಉಯ್ಯಾಲೆ ಇದ್ದಕ್ಕಿದ್ದಂತೆ ಬಿದ್ದಿದೆ. ತೂರಿ ಬಿದ್ದ ಪರಿಣಾಮ ಹಲವು ಮಕ್ಕಳು ಗಾಯಗೊಂಡಿದ್ದು, ಅವರನ್ನು ವೀಕ್ಷಕರು ಮತ್ತು ಝಬುವಾ ಠಾಣಾ ಸಿಬ್ಬಂದಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.