Budget: ನಾಯಕತ್ವ ಬದಲಾವಣೆ ಚರ್ಚೆ ಮಧ್ಯೆಯೇ ಸಿಎಂ ಸಿದ್ದರಾಮಯ್ಯ (CM Siddaramaiah) ಇಂದಿನಿಂದ ಬಜೆಟ್ ಸಿದ್ಧತೆ ಶುರು ಮಾಡಿದ್ದಾರೆ. ಈ ಮೂಲಕ ಕುರ್ಚಿ ಆಸೆಯಲ್ಲಿರೋ ಡಿಸಿಎಂ ಡಿಕೆಶಿವಕುಮಾರ್‌ಗೆ (DK Shivakumar) ಕೌಂಟರ್ ಕೊಟ್ಟಿದ್ದಾರೆ.
ಎರಡು ದಿನ ದೆಹಲಿ ಯಾತ್ರೆ ಮಾಡಿದರೂ ಡಿಸಿಎಂ ಡಿಕೆಶಿವಕುಮಾರ್‌ಗೆ ಹೈಕಮಾಂಡ್ ಅಭಯ ನೀಡಿಲ್ಲ. ಡಿಕೆ ಶಿವಕುಮಾರ್ ದೆಹಲಿ ಹೋಗಿ ಬಂದ ಕೂಡಲೇ ಸಿಎಂ ಸಿದ್ದರಾಮಯ್ಯ ಬಜೆಟ್ (State Budget) ಸಿದ್ಧತೆ ಶುರು ಮಾಡಿ, ನಾನೇ ಈ ಬಾರಿ ಬಜೆಟ್ ಮಂಡನೆ ಮಾಡ್ತೀನಿ ಎಂಬ ಸಂದೇಶ ಕೊಟ್ಟಿದ್ದಾರೆ. ಈ ಮೂಲಕ ನಾಯಕತ್ವ ಬದಲಾವಣೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ರ್ವಭಾವಿ ಸಭೆ ನಡೆಸಿರೋ ಸಿಎಂ ಮುಂದಿನ ದಿನಗಳಲ್ಲಿ ಪ್ರತಿ ಇಲಾಖಾವಾರು ಸಭೆಗಳನ್ನ ನಡೆಸಲಿದ್ದಾರೆ. ಬಜೆಟ್ ಸಿದ್ಧತೆ ಬಗ್ಗೆ ಪ್ರತಿಕ್ರಿಯೆ ನೀಡಿರೋ ಸಿಎಂ, ಜನವರಿ 22ರಿಂದ ಜಂಟಿ ಅಧಿವೇಶನ, ಮನರೇಗಾ ಬಗ್ಗೆ ಚರ್ಚೆಗೆ ವಿಶೇಷ ಅಧಿವೇಶನ ನಡೆಯುತ್ತಿದೆ. ಈ ಅಧಿವೇಶನ ಮುಗಿದ ಕೂಡಲೇ ಸಿದ್ಧತೆ ಶುರು ಮಾಡೋದಾಗಿ ತಿಳಿಸಿದ್ದಾರೆ.













