ನಟ ಸುದೀಪ್ ಅವರ ನಿರ್ಮಾಣದ ʼವಾರಸ್ದಾರʼ ಧಾರಾವಾಹಿ ವಿಷಯವಾಗಿ ನಡೆದ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದ್ದು, ಕಿಚ್ಚ ಸುದೀಪ್, ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಆರೋಪ ವಂಚನೆ ಕೇಳಿ ಬಂದಿದೆ. ಹಣ ಕೊಡುವುದಾಗಿ ನಂಬಿಸಿ ಕೇಸ್ ಹಿಂಪಡೆದುಕೊಳ್ಳುವಂತೆ ಸುದೀಪ್-ಚಕ್ರವರ್ತಿ ಚಂದ್ರಚೂಡ್ ಮಾಡಿದ್ದಾಗಿ ಆರೋಪವಿದೆ. ನಂತರ ಹಣ ಕೊಡದೆ ವಂಚನೆ ಮಾಡಿದ್ದಾರೆ ಎನ್ನಲಾಗಿದೆ.
95 ಲಕ್ಷ ಹಣ ಪರಿಹಾರ ನೀಡುವಂತೆ ದೀಪಕ್ ಅವರು ಕೇಸು ಹಾಕಿದ್ದರು. 2023 ರಲ್ಲಿ ಎನ್ ಕುಮಾರ್ ಎನ್ನುವವರು ದೀಪಕ್ಗೆ ಕರೆ ಮಾಡಿದ್ದು ನಮಗೂ ಹಣ ನೀಡದೆ ನಟ ಸುದೀಪ್ ಅವರು ವಂಚನೆ ಮಾಡಿದ್ದಾರೆ ಎಂದು ಹೇಳಿದ್ದರು. ಆ ನಂತರ ದೀಪಕ್ ಚಕ್ರವರ್ತಿ ಚಂದ್ರಚೂಡ್ಗೆ ಕರೆ ಮಾಡಿದ್ದರು. ಆಗ ಚಂದ್ರಚೂಡ್ ಚೆನ್ನೈಗೆ ಬರಲು ಹೇಳಿದ್ದರಂತೆ.
ಕೇಸನ್ನು ವಾಪಸ್ ಪಡೆದರೆ 60 ಲಕ್ಷ ನೀಡುವುದಾಗಿ ಸುದೀಪ್ ಭರವಸೆ ನೀಡುವುದಾಗಿ ದೀಪಕ್ ಮಾತು. ಕೇಸು ಪಡೆಯುವ ಮೊದಲು ಚಕ್ರವರ್ತಿ 10 ಲಕ್ಷ ರೂ. ಚೆಕ್ ನೀಡಿದ್ದರಂತೆ. ಈ ವಿಶ್ವಾಸದ ಮೇರೆಗೆ ದೀಪಕ್ ಕೇಸು ಹಿಂಪಡೆದಿದ್ದರು. ಆದರೆ ಕೇಸ್ ಹಿಂಪಡೆಯುತ್ತಿದ್ದಂತೆ ಚಕ್ರವರ್ತಿ ಅವರು ದೀಪಕ್ನ ನಂಬರ್ ಬ್ಲಾಕ್ ಮಾಡಿದ್ದಾರ ಎಂದು ವರದಿಯಾಗಿದೆ.
ಇದೀಗ ಬೆಂಗಳೂರು ಕಮಿಷನ್ ಕಚೇರಿಯಲ್ಲಿ ದೀಪಕ್ ದೂರು ನೀಡಿದ್ದಾರೆ.













