Home Crime ಪುತ್ತೂರು: ಅಂಗಡಿಗೆ ಬಂದು ದಾಂಧಲೆ; ಪ್ರಕರಣ ದಾಖಲು

ಪುತ್ತೂರು: ಅಂಗಡಿಗೆ ಬಂದು ದಾಂಧಲೆ; ಪ್ರಕರಣ ದಾಖಲು

Crime

ಪುತ್ತೂರು: ಸಾಮಾನು ಖರೀದಿ ನೆಪದಲ್ಲಿ ಅಂಗಡಿಗೆ ಬಂದ ಇಬ್ಬರು ಯುವಕರು ಜಗಳ ತೆಗೆದು, ನಂತರ ಅಂಗಡಿಯೊಳಗಿದ್ದ ವಸ್ತುಗಳನ್ನು ಹಾಳುಗೆಡವಿ ನಷ್ಟ ಉಂಟು ಮಾಡಿರುವ ಘಟನೆ ನಡೆದಿದೆ. ಅಲ್ಲದೇ ಅಂಗಡಿ ಮಾಲಕಿಗೆ ಅವಾಚ್ಯವಾಗಿ ಬೈದಿರುವ ಘಟನೆ ಪಾಣಾಜೆಯಿಂದ ವರದಿಯಾಗಿದೆ.

ವಿಮಲ (45) ಎನ್ನುವವರು ಈ ಕುರಿತು ಪೊಲೀಸರಿಗೆ ದೂರನ್ನು ನೀಡಿದ್ದಾರೆ.

ಜ.18ರಂದು ರಾತ್ರಿ 8.30 ಗಂಟೆಗೆ ಆರ್ಲಪದವು ಸೈಡ್‌ನಿಂದ ಅಂಗಡಿಗೆ ಬಂದ ಪುನೀತ್ ಮತ್ತು ಅಜಯ್ ಎಂಬವರು ಸಾಮಾನು ಖರೀದಿಸುವ ನೆಪದಲ್ಲಿ ಜಗಳ ತೆಗೆದು ದಾಂಧಲೆ ನಡೆಸಿ ಅಂಗಡಿಯೊಳಗಿದ್ದ ಚಾಕಲೇಟ್, ಬಿಸ್ಕೆಟ್, ಇನ್ನಿತರ ವಸ್ತುಗಳನ್ನು ಹೊರಗೆ ಬಿಸಾಡಿ ಹಾಳುಗೆಡವಿ ಸುಮಾರು 5,000 ರೂ. ನಷ್ಟವುಂಟು ಮಾಡಿದ್ದಲ್ಲದೇ, ನೀನು ಪಂಚಾಯತ್ ಸದಸ್ಯೆ ಅಲ್ಲವಾ? ನಿನ್ನನ್ನು ನಿನ್ನ ಅಂಗಡಿಯನ್ನು ಹುಡಿ ಮಾಡುತ್ತೇನೆ, ನಿನ್ನ ಮನೆಗೆ ನುಗ್ಗಿ, ನಿನ್ನ ಮನೆಯವರನ್ನು ಕೊಲೆ ಮಾಡುತ್ತೇನೆ’ ಎಂದು ಬೆದರಿಕೆ ಹಾಕಿರುತ್ತಾರೆ ಎಂದು ವಿಮಲ ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಪುತ್ತೂರು ಗ್ರಾಮಾಂತರ ಪೊಲೀಸರು BNS (4),351 (2) 3(5),352 22-2023 ಪ್ರಕರಣ (0008/2026)ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.