Home News Lakkundi : ಉತ್ಖನನದ ವೇಳೆ ಮನೆಯೊಳಗಡೆ ಶಿವನ ದೇವಾಲಯ ಪತ್ತೆ!!

Lakkundi : ಉತ್ಖನನದ ವೇಳೆ ಮನೆಯೊಳಗಡೆ ಶಿವನ ದೇವಾಲಯ ಪತ್ತೆ!!

Lakkundi : ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ (Lakkundi Excavation)ಕಾರ್ಯ ದಿನಕ್ಕೊಂದು ರಹಸ್ಯವನ್ನು ಬಹಿರಂಗಪಡಿಸುತ್ತಿದ್ದು, ರಾಜ್ಯದ ಜನರ ಕುತೂಹಲವನ್ನು ಹೆಚ್ಚಿಸಿದೆ. ಈ ನಡುವೆ ಗ್ರಾಮದಲ್ಲಿರುವ ಮನೆಯೊಳಗೊಂದು ಐತಿಹಾಸಿಕದೇವಸ್ಥಾನಪತ್ತೆಯಾಗಿದೆ.

ಹೌದು, ಲಕ್ಕುಂಡಿ ಗ್ರಾಮದಲ್ಲಿರುವ ಮನೆಯೊಂದರಲ್ಲಿ ಚಾಲುಕ್ಯರ ಕಾಲದ ಪುರಾತನ ದೇವಸ್ಥಾನ ಪತ್ತೆಯಾಗಿದೆ. ಚೌಕಿಮಠ ಮನೆತನದ ಆವರಣದಲ್ಲಿ ಈಶ್ವರ ಹಾಗೂ ಅರ್ಧನಾರೇಶ್ವರ ದೇವಸ್ಥಾನವಿದೆ. ಈ ಪುರಾತನ ದೇಗುಲವನ್ನು ಪರಿಶೀಲನೆ ನಡೆಸಿರುವ ಇತಿಹಾಸಕಾರರು ಇದು ಚಾಲುಕ್ಯರ ಕಾಲದ ಈಶ್ವರ ದೇವಸ್ಥಾನ ಎಂದು ಹೇಳಿದ್ದಾರೆ.

ಲಕ್ಕುಂಡಿಯ ಕುಂಬಾರ ಓಣಿಯಲ್ಲಿರುವ ಚೌಕಿಮಠ ಎಂಬುವವರ ಮನೆ ಹೊರನೋಟಕ್ಕೆ ಸಾಮಾನ್ಯ ಮನೆಯಂತೆ ಕಂಡರೂ, ಅದರ ಒಳಾಂಗಣ ಮಾತ್ರ ಅದ್ಭುತ ಇತಿಹಾಸವನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಮನೆಯ ಅಂಗಳಕ್ಕೆ ಕಾಲಿಡುತ್ತಿದ್ದಂತೆಯೇ ಅಲ್ಲಿ ಸುಂದರವಾದ ಮಂಟಪ ಹಾಗೂ ಮಹಾಂತೇಶ್ವರ ದೇವರ ಮೂರ್ತಿ ಕಣ್ಮನ ಸೆಳೆಯುತ್ತದೆ. ಇನ್ನೂ ಅಚ್ಚರಿಯ ವಿಷಯವೆಂದರೆ, ಕುಟುಂಬದ ಸದಸ್ಯರು ಓಡಾಡುವ ಮನೆಯ ಹಾಲ್‌ನ ಪಕ್ಕದಲ್ಲೇ ಪುರಾತನ ಈಶ್ವರನ ಗರ್ಭಗುಡಿಯಿದೆ!

ಈ ದೇವಾಲಯದೊಳಗೆ ನಾಲ್ಕನೇ ಶತಮಾತನದ ಶಿವನ ಮೂರ್ತಿಯಿದೆ. ಈ ಮೂರ್ತಿಯನ್ನೇ ಕುಟುಂಬದವರು ಆರಾಧಿಸುತ್ತಾ ಬಂದಿದ್ದಾರೆ. ಸುಮಾರು 5 ತಲೆಮಾರಿನಿಂದ ಈ ಕುಟುಂಬ ಇಲ್ಲಿ ವಾಸಿಸುತ್ತಿದೆ.