Viral Video : ಕೆಲವು ದಿನಗಳ ಹಿಂದಷ್ಟೇ ಬ್ಯಾಂಕ್ ಒಂದಕ್ಕೆ ಜಿಂಕೆ ನುಗ್ಗಿದ ವಿಚಾರ ಭಾರಿ ಸುದ್ದಿಯಾಗಿತ್ತು. ಇದೀಗ ಕೆ ಎಸ್ ಆರ್ ಟಿ ಸಿ ಬಸ್ನಲ್ಲಿ ಧಾರವಾಡದಿಂದ ಹುಬ್ಬಳ್ಳಿಯವರೆಗೆ ಕೋತಿ ಒಂದು ಫ್ರೀ ಆಗಿ ಪ್ರಯಾಣ ಮಾಡಿದೆ.
ಹೌದು, ಪವರ್ ನ್ಯೂಸ್ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತಾದ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ಕೆಎಸ್ಆರ್ಟಿಸಿ ಬಸ್ ನೊಳಗಡೆ ಸೀಟಿನ ಮೇಲೆ ಕೋತಿ ಕುಳಿತಿರುವುದನ್ನು ನೋಡಬಹುದು. ಪ್ರಯಾಣಿಕರು ಆರಂಭದಲ್ಲಿ ಗಾಬರಿಯಾಗಿದ್ದು ನಂತರ ಡ್ರೈವರ್ ಗೆ ಇರ್ಲಿ ಬಿಡಿ, ನೀವು ಮುಂದೆ ಹೋಗಿ ಎಂದು ಹೇಳುತ್ತಿರುವುದನ್ನು, ಅವರವರೇ ಏನು ಮಾಡುವುದಿಲ್ಲ ಬಿಡಿ ಎಂದು ಮಾತನಾಡಿಕೊಳ್ಳುವುದನ್ನು ಕಾಣಬಹುದು.
ಒಟ್ಟಿನಲ್ಲಿ ವಿಡಿಯೋದಲ್ಲಿ ತಿಳಿಸಿರುವಂತೆ ಕೋತಿಯು ಧಾರವಾಡದಿಂದ ಹುಬ್ಬಳ್ಳಿಗೆ ಬಸ್ನಲ್ಲಿ ಟ್ರಾವೆಲ್ ಮಾಡಿದೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
https://www.instagram.com/reel/DTulxMyD-4a/?igsh=MThvNDlhZ2xoZmZqMQ==













