Home News ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ನಬಾರ್ಡ್ ಅಧಿಕಾರಿಗಳಿಂದ ಅಧ್ಯಯನ ಪ್ರವಾಸ

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ನಬಾರ್ಡ್ ಅಧಿಕಾರಿಗಳಿಂದ ಅಧ್ಯಯನ ಪ್ರವಾಸ

ಬಂಗಾಡಿ: ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಯನಕ್ಕಾಗಿ 45 ಜನ ಸದಸ್ಯರ ದೇಶದ ವಿವಿಧ ರಾಜ್ಯಗಳ ಅಧಿಕಾರಿಗಳ ತಂಡವು ಜ.20ರಂದು ಭೇಟಿ ನೀಡಿತು. PACS AS MSC ಯೋಜನೆಡಿ ನಿರ್ಮಾಣವಾಗಿ ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಕಡಿರುದ್ಯಾವರ ಶಾಖೆಗೆ ಬೇಟಿ ನೀಡಿತು.

ಸಂಘದ ಅಧ್ಯಕ್ಷ ಹರೀಶ್ ಸಾಲಿಯಾನ್ ಅವರು ಮುಖಾಂತರ ವಿತರಣೆಯಾಗುತ್ತಿರುವ ಸಾಲ ಯೋಜನೆಗಳು ಮತ್ತು ಸಂಘದ ಮುಖಾಂತರ ನಡೆಸುತ್ತಿರುವ ಮಾರಾಟ ವ್ಯವಹಾರಗಳ ಸಮಗ್ರವಾದ ಮಾಹಿತಿಯನ್ನು ನೀಡಿದರು.

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘವು 1200 ಕೋಟಿ ವ್ಯವಹಾರವನ್ನು ನಡೆಸಿ, 6720 ಸದಸ್ಯರನ್ನು ಹೊಂದಿ,ರೂ 203 ಕೋಟಿಗೂ ಮಿಕ್ಕಿ ಸಾಲ ನೀಡಲಾಗಿದ್ದು, ಇದರಲ್ಲಿ 75.28 ಕೋಟಿಗೂ ಮಿಕ್ಕಿ ಕೃಷಿ ಸಾಲಗಳನ್ನು ವಿತರಿಸಲಾಗಿದೆ. ಹಾಗೂ 127.72 ಕೃಷಿಯೇತರ ಸಾಲಗಳನ್ನು ವಿತರಿಸಲಾಗಿದೆ. 2024-25 ನೇ ಸಾಲಿನಲ್ಲಿ 4.81 ಕೋಟಿ ಲಾಭಗಳಿಸಿದೆ. ಮತ್ತು 10 ಕೋಟಿ ಮಾರಾಟ ವ್ಯವಹಾರವನ್ನು ನಡೆಸಲಾಗಿದೆ.

ಸಂಘವು ಪೂರ್ಣ ಪ್ರಮಾಣದ ಮುಖ್ಯ ಕಚೇರಿ ಸೇರಿ ಒಂಬತ್ತು ಶಾಖೆಗಳನ್ನು ಹೊಂದಿದ್ದು, ಪತ್ತು ಮತ್ತು ಪತ್ತೇತರ ವ್ಯವಹಾರಗಳನ್ನು ನಡೆಸುತ್ತಿದೆ. ಈ ಎಲ್ಲಾ ವ್ಯವಹಾರಗಳ ಯಶಸ್ವಿ ಅನುಷ್ಟಾನದಿಂದ ನಬಾರ್ಡಿನ ಗಮನ ಸೆಳೆದಿದ್ದು, ಸಂಘದ ಯಶಸ್ವೀ ವ್ಯವಹಾರಕ್ಕೆ ಅಪೆಕ್ಸ್ ಬ್ಯಾಂಕಿನ ರಾಜ್ಯದ ಅತ್ಯುತ್ತಮ ಸಹಕಾರ ಸಂಘ ಮತ್ತು ದ.ಕ.ಜಿ.ಕೇಂದ್ರ ಸಹಕಾರ ಬ್ಯಾಂಕಿನಿಂದ ಜಿಲ್ಲಾ ಮಟ್ಟದ ಉತ್ತಮ ಸಹಕಾರ ಸಂಘವೆಂಬ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದೆ.

ನಬಾರ್ಡ್ ಸಂಸ್ಥೆಯ ಡಿ.ಡಿ.ಎಮ್ ಯೋಗಿಶ್, ಹಾಗೂ ಸಂಘದ ಉಪಾಧ್ಯಕ್ಷ ಆನಂದ ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿಗಾರ ಮತ್ತು ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಗೌಡ ಹಾಗೂ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.