Maharastra : ಮಹಾರಾಷ್ಟ್ರದ (Maharashtra) ರಾಜಕೀಯದಲ್ಲಿ ದಿನದಿಂದ ದಿನಕ್ಕೆ ಹೊಸ ತಿರುವುಗಳು ಕಾಣಿಸಿಕೊಳ್ಳುತ್ತಿದ್ದು, ಈಗ ಮುಂಬೈ ಮೇಯರ್ (Mayor) ಹುದ್ದೆ ಕುರಿತ ರಾಜಕೀಯ ಸೆಣಸಾಟ ನಡೆಯುತ್ತಿರುವ ಹೊತ್ತಲ್ಲೇ ಬಿಜೆಪಿಗೆ ದೊಡ್ಡ ಅಘಾತ ಎದುರಾಗಿದೆ. ಮೇಯರ್ ಪಟ್ಟಕ್ಕಾಗಿ ಶಿಂಧೆ ಬಣದ ಶಿವಸೇನೆ, ರಾಜ್ ಠಾಕ್ರೆ ಜೊತೆ ಕೈಜೋಡಿಸಿ ಕಮಲ ಪಾಳಯಕ್ಕೆ ದೊಡ್ಡ ಶಾಕ್ ನೀಡಿದೆ
ಹೌದು, ಮಹಾರಾಷ್ಟ್ರದಲ್ಲಿ ಕಲ್ಯಾಣ್-ಡೊಂಬಿವಲಿ ಮುನ್ಸಿಪಲ್ ಕಾರ್ಪೊರೇಷನ್ (KDMC) ರಾಜಕೀಯ ವಲಯದಲ್ಲಿ ಭಾರೀ ಬದಲಾವಣೆ ಸಂಭವಿಸಿದೆ. ಬಿಜೆಪಿಗೆ ಅಚ್ಚರಿ ಮೂಡಿಸುವ ರೀತಿಯಲ್ಲಿ, ಏಕನಾಥ್ ಶಿಂಧೆ (Eknaat Shinde) ನೇತೃತ್ವದ ಶಿವಸೇನೆ ಬಣವು ತನ್ನ ಹಳೆಯ ಮಿತ್ರ ಪಕ್ಷ ಬಿಜೆಪಿ (BJP) ಬಿಟ್ಟು, ರಾಜ್ ಠಾಕ್ರೆ (Raj Thackrey) ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆಯೊಂದಿಗೆ (ಎಂಎನ್‌ಎಸ್) ಕೈಜೋಡಿಸಿದೆ.
ಕೆಡಿಎಂಸಿ (ಕಲ್ಯಾಣ್-ಡೊಂಬಿವಿಲಿ ಮುನ್ಸಿಪಲ್ ಕಾರ್ಪೊರೇಷನ್ ) ಚುನಾವಣೆಗೂ ಶಿವಸೇನೆ (ಯುಬಿಟಿ) ಮತ್ತು ರಾಜ್ ಠಾಕ್ರೆಯ ಎಂಎನ್‌ಎಸ್ ಮೈತ್ರಿ ಮಾಡಿಕೊಂಡಿದ್ದವು. ಆದರೆ, ಫಲಿತಾಂಶದ ಬಳಿಕ, ಎಂಎನ್‌ಎಸ್ ಶಿಂಧೆ ಬಣಕ್ಕೆ ತನ್ನ ಬೆಂಬಲವನ್ನು ಘೋಷಿಸಿದ್ದು, ಇದು ಉದ್ಧವ್ ಬಣಕ್ಕೆ ಆಘಾತ ತಂದಿದೆ. ಎಂಎನ್‌ಎಸ್ ಪ್ರಕಾರ, ಪಕ್ಷದ ಮುಖ್ಯಸ್ಥ ರಾಜ್ ಠಾಕ್ರೆ ಸ್ಥಳೀಯ ನಾಯಕರಿಗೆ ವಾಸ್ತವಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲು ಅಧಿಕಾರ ನೀಡಿದ್ದರು. ಕಲ್ಯಾಣ್-ಡೊಂಬಿವ್ಲಿ ಪ್ರದೇಶದ ಅಭಿವೃದ್ಧಿಯ ಹಿತದೃಷ್ಟಿಯಿಂದ ಶಿಂಧೆ ನೇತೃತ್ವದ ಶಿವಸೇನೆಗೆ ಬೆಂಬಲ ನೀಡುವ ನಿರ್ಧಾರವನ್ನು ಸ್ಥಳೀಯ ನಾಯಕತ್ವ ತೆಗೆದುಕೊಂಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬುಧವಾರ ಕೊಂಕಣ ಭವನದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ, ಸಂಸದ ಮತ್ತು ಏಕನಾಥ್ ಶಿಂಧೆ ಅವರ ಪುತ್ರ ಶ್ರೀಕಾಂತ್, ರಾಜ್ ಠಾಕ್ರೆ ಅವರ ಪಕ್ಷದೊಂದಿಗಿನ ಮೈತ್ರಿಯನ್ನು ದೃಢಪಡಿಸಿದ್ದಾರೆ. ಇದು ಬಲವನ್ನು 58 ಕ್ಕೆ ಏರಿಸಿದೆ, 62 ಸ್ಥಾನಗಳ ಬಹುಮತಕ್ಕಿಂತ ಸ್ವಲ್ಪ ಕಡಿಮೆಯಾಗಿದ್ದು, ಉದ್ಧವ್ ಬಣದ ನಾಲ್ವರು ಕಾರ್ಪೊರೇಟರ್‌ಗಳು ಮೈತ್ರಿಕೂಟಕ್ಕೆ ಸೇರಬಹುದು ಎಂದು ಹೇಳಲಾಗಿದೆ. ಫಲಿತಾಂಶದ ನಂತರದ ಈ ತಿರುವು 2.5 ವರ್ಷಗಳ ವಿಭಜಿತ ಮೇಯರ್ ಅವಧಿಯೊಂದಿಗೆ ಅಧಿಕಾರ ಹಂಚಿಕೆ ಒಪ್ಪಂದವನ್ನು ಒತ್ತಾಯಿಸುತ್ತಿದ್ದ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ಈಗ ಶಿಂಧೆ ಸೇನೆಯು ಪೂರ್ಣ ಅವಧಿಗೆ ಮೇಯರ್ ಸ್ಥಾನವನ್ನು ಉಳಿಸಿಕೊಳ್ಳಲು ಉತ್ಸುಕವಾಗಿದೆ.












