Puttur: ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲ ಇಲ್ಲಿಗೆ ಶಾಲಾ ಶಿಕ್ಷಣ ಇಲಾಖೆಯ ಗುಣಮಟ್ಟ ವಿಭಾಗದ ನಿರ್ದೇಶಕ ಶ್ರೀ ಮಾರುತಿ ಇವರು ಭೇಟಿ ನೀಡಿ ಶೈಕ್ಷಣಿಕ ಪ್ರಗತಿ ಪರಿಶೀಲನೆ ಮಾಡಿ ಪ್ರಶಂಸೆಯ ಮಾತುಗಳನ್ನಾಡಿದರು.
ಗಣಿತ,ವಿಜ್ಞಾನ ಕಿಟ್ ಗಳು, ಓದು ಕರ್ನಾಟಕ, ದ್ವಿಭಾಷಾ ಬೋಧನೆ,ಬಾಲವಟಿಕಾ ಕಾರ್ಯಕ್ರಮಗಳನ್ನು ಅತ್ಯಂತ ಸೂಕ್ಷ್ಮವಾಗಿ ಮಕ್ಕಳೊಂದಿಗೆ ಬೆರೆತು ಪರಿಶೀಲಿಸಿದರು. ಮಕ್ಕಳಲ್ಲೆ ಅನೇಕ ಪ್ರಯೋಗ ಮಾಡಿಸಿದರು. ಮಕ್ಕಳ ಬ್ಯಾಂಡ್ ಸೆಟ್ ,ಯೋಗ ಪ್ರದರ್ಶನ, ಕರಾಟೆ, ಸಂಗೀತ ,ಚಿತ್ರಕಲೆ, ಕ್ರಾಪ್ಟ್ ಕಾರ್ಯಗಳು, ಖಾನ್ ಅಕಾಡೆಮಿ, ಮಿಷನ್ ಪ್ರಕೃತಿ, ಕಲಿಕಾ ದೀಪ, ಸಚೇತನ ಚಟುವಟಿಕೆಗಳನ್ನು ವೀಕ್ಷಿಸಿ ಮುಕ್ತ ಕಂಠದಿಂದ ಶ್ಲಾಘಿಸಿದರು.
ಅIತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯಗುರುಗಳನ್ನು,ಶಿಕ್ಷಕ ವೃಂದದವರನ್ನು ವಿದ್ಯಾರ್ಥಿಗಳನ್ನು ಹಾಗೂ ಎಸ್ ಡಿ ಎಂ ಸಿ ಯವರನ್ನು ಅಭಿನಂದಿಸಿದರು. ಮಿಯಾವಾಕಿ ವನ,ಶಾಲಾ ಕೈ ತೋಟ, ಶಾಲಾ ಕ್ರೀಡಾಂಗಣ, ಸೋಲಾರ್, ಕಟ್ಟಡ ಕಾಮಗಾರಿ ಇತ್ಯಾದಿ ಭೌತಿಕ ಪರಿಸರವನ್ನು ವೀಕ್ಷಿಸಿದರು. ಶಾಲೆಯು ಮಾದರಿಯಾಗಿ ಕಾರ್ಯ ನಿರ್ವಹಿಸುವುದಕ್ಕಾಗಿ ಇಲಾಖೆ ಅಭಿನಂದಿಸುತ್ತದೆ ಎಂದು ವರದಿಯಲ್ಲಿ ದಾಖಲಿಸಿದರು .ದ.ಕ ಜಿಲ್ಲೆಯ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಯವರು ಹಾಗೂ ಸಮನ್ವಯಾಧಿಕಾರಿಯವರು ಉತ್ತಮ ಮಾರ್ಗದರ್ಶನ ಈ ಶಾಲೆ ಮಾದರಿಯಾಗಲು ಸಹಕಾರಿಯಾಗಿದೆ ಎಂದರು.
ಬೇಟಿ ಸಂದರ್ಭದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಇಲ್ಲಿನ ಹಿರಿಯ ಕಾರ್ಯಕ್ರಮಾಧಿಕಾರಿ ಶ್ರೀ ಚಂದ್ರಶೇಖರ್, ಕಿರಿಯ ಕಾರ್ಯಕ್ರಮಾಧಿಕಾರಿಗಳಾದ ಶ್ರೀ ಚಂದ್ರಕುಮಾರ್ ಹಾಗೂ ಶ್ರೀ ಎಡ್ವಿನ್ ಕ್ರಿಸ್ಟೋಫರ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ವಿಷ್ಣುಪ್ರಸಾದ್ ಸಮನ್ವಯಾಧಿಕಾರಿ ಶ್ರೀ ನವೀನ್ ಸ್ಟಿಫನ್ ವೇಗಸ್ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ತಾರಾನಾಥ ಪಿ ಸ್ವಾಗತಿಸಿದರು. ಬ್ಯಾಂಡ್ ದಂಡನಾಯಕ ಶಿವಶನ್ಮಯಿ ಗೌರವ ಸಮರ್ಪಣೆ ಮಾಡಿದರು. ಮಕ್ಕಳ ಆಕರ್ಷಕ ಬ್ಯಾಂಡ್ ಸ್ವಾಗತ ಮತ್ತು ಯೋಗ ಪ್ರದರ್ಶನ ಗಮನ ಸೆಳೆಯಿತು. ಶಿಕ್ಷಕರಾದ ಹರಿಣಾಕ್ಷಿ ಎಂ, ಶೋಬಾ, ಶ್ರೀಲತಾ, ಹೇಮಾವತಿ, ಕವಿತಾ,ಶಿಲ್ಪರಾಣಿ,ಸೌಮ್ಯ,ಸಂಗೀತ ಶಿಕ್ಷಕ ಗೋಪಾಲಕೃಷ್ಣ, ಕಂಪ್ಯೂಟರ್ ಶಿಕ್ಷಕಿ ಚೈತ್ರಾ, ಚಿತ್ರಕಲೆ ಶಿಕ್ಷಕ ಕಾರ್ತಿಕ್, ಯೋಗ ಶಿಕ್ಷಕ ಹಿಮತ್, ಇಂಗ್ಲಿಷ್ ಶಿಕ್ಷಕಿ ಕೌಸಲ್ಯ, ಆಪ್ತ ಸಮಾಲೋಚಕಿ ಸೌಮ್ಯ, ಕರಾಟೆ ಶಿಕ್ಷಕ ನಾರಾಯಣ ಆಚಾರ್ಯ ಮಳಿ, ಎಲ್ ಕೆ ಜಿ ಶಿಕ್ಷಕಿ ಸಂಚನಾ, ಯುಕೆಜಿ ಶಿಕ್ಷಕಿ ಸವಿತಾ,ಆಯಾ ಚಂದ್ರಾವತಿ ಉಪಸ್ಥಿತರಿದ್ದರು.













