ಹಾಸನ: ಶಾಲಾ ಬಾಲಕಿಯನ್ನು ಹಿಂಬಾಲಿಸಿಕೊಂಡು ಬಂದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಶಾಲೆಯಿಂದ ವಾಪಸು ಮನೆಗೆ ಬರುತ್ತಿದ್ದ ಬಾಲಕಿಯನ್ನು ಹಿಂಬಾಲಿಸಿಕೊಂಡು ಬಂದು, ಆಕೆಯ ಮನೆ ತಲುಪಿ ಮನೆಯ ಗೇಟ್ ಒಳಗೆ ಓಡಿ ಹೋಗಿದ್ದು, ಗೇಟ್ ಬಡಿದು ಕಿರುಕುಳ ನೀಡಿದ್ದ ಅಪರಿಚತ ವ್ಯಕ್ತಿಯ ಬಂಧನವಾಗಿದೆ.
ಹಾಸನದ 80 ಅಡಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಬಾಲಕಿಯನ್ನು ಹಿಂಬಾಲಿಸಿಕೊಂಡು ಬಂದ ವ್ಯಕ್ತಿಯಿಂದ ಆತಂಕಗೊಂಡ ಬಾಲಕಿ ಓಡಿ ಹೋಗಿ ಮನೆಯ ಗೇಟ್ ಲಾಕ್ ಮಾಡಿಕೊಂಡಿದ್ದಳು. ಆಗ ಅಪರಿಚಿತ ವ್ಯಕ್ತಿ ಮನೆಯ ಬಳಿ ಬಂದ ಮನೆಯ ಗೇಟ್ ಬಡಿದು, ಗೇಟ್ ತೆರೆಯುವಂತೆ ಅವಾಜ್ ಹಾಕಿದ್ದಾನೆ. ಬಾಲಕಿ ಮನೆಯ ಬಾಗಿಲು ತೆಗೆಯದಿರುವಾಗ ಮನೆಯ ಹಿಂಬಾಗಿಲ ಬಳಿ ಹೋಗಿ ಕೂಡಾ ಅಲ್ಲಿಯೂ ಬಾಗಿಲು ಬಡಿದು ಹೆದರಿಸಿದ್ದಾನೆ.
ಈ ದೃಶ್ಯವೆಲ್ಲ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಘಟನೆಯ ನಂತರ ಬಾಲಕಿ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದು, ಪೋಷರು ಪೆನ್‌ಶೆನ್ ಮೊಹಲ್ಲಾ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು.
ಇದೀಗ ಪೊಲೀಸರು ಅಪರಿಚಿತ ನನ್ನು ಬಂಧನ ಮಾಡಿದ್ದಾರೆ. ಈತ ಕೋಲಾರ ಜಿಲ್ಲೆಯ ದಂಡಿಹಳ್ಳಿ ಹೋಬಳಿಯ ಪ್ರಸನ್ನ (38) ಎಂದು ಗುರುತಿಸಲಾಗಿದೆ.















