ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಹಾಗೂ ಮಹಾಗಣಪತಿ ದೇವರ ಸೇವಾರ್ಥ ಹಿಬರೋಡಿ ಯಕ್ಷೋತ್ಸವ ನಡೆಯಲಿದೆ.
ದಿನಾಂಕ 29-01-2026 ನೇ ಗುರುವಾರ, ಹಿಬರೋಡಿ ತೆಂಕಕಾರಂದೂರು, ಬದ್ಯಾರುನಲ್ಲಿ ʼಹಿಬರೋಡಿ ಯಕ್ಷೋತ್ಸವʼ ನಡೆಯಲಿದೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ʼಸಹಸ್ರ ಕವಚ ಮೋಕ್ಷʼ ಎಂಬ ಪುರಾಣ ಕಥಾ ಭಾಗವನ್ನು ಸೇವೆ ಬಯಲಾಟವಾಗಿ ಅಭಿನಯಿಸಲಿರುವರು. ಆ ಪ್ರಯುಕ್ತ ಸದ್ರಿ ದಿನ ಮಧ್ಯಾಹ್ನ ಗಂಟೆ 12ಕ್ಕೆ ನಡೆಯುವ ಗಣಪತಿ ಹೋಮ ಹಾಗೂ ಪ್ರಸಾರ ಭೋಜನ ಮತ್ತು ರಾತ್ರಿ ನಡೆಯುವ ಯಕ್ಷಗಾನ ಬಯಲಾಟಕ್ಕೆ ಸ್ವಾಗತ ಕೋರಲಾಗಿದೆ.
ಈ ಕಾರ್ಯಕ್ರಮಕ್ಕೆ ಶ್ರೀಮತಿ ಮತ್ತು ಶ್ರೀ ದೇವದಾಸ್ ಶೆಟ್ಟಿ ಅನುಗ್ರಹ ನಿಲಯ ಹಿಬರೋಡಿ, ಬದ್ಯಾರು, ಗುರುವಾಯನಕೆರೆ ಇವರು ಸ್ವಾಗತವನ್ನು ಕೋರಿದ್ದಾರೆ.














