ಕೇಂದ್ರ ಮೀಸಲು ಪೊಲೀಸ್ ಪಡೆಯ ಸಹಾಯಕ ಕಮಾಂಡೆಂಟ್ ಆಗಿರುವ 26 ವರ್ಷದ ಸಿಮ್ರಾನ್ ಬಾಲಾ, 77ನೇ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಸಂಪೂರ್ಣ ಪುರುಷರಿಂದ ಕೂಡಿದ (140 ಕ್ಕೂ ಹೆಚ್ಚು ಪುರುಷ ಸಿಬ್ಬಂದಿಗಳ ಬೃಹತ್ ತುಕುಡಿ) CRPF ಘಟಕವನ್ನು ಮುನ್ನಡೆಸುವ ಮೊದಲ ಮಹಿಳಾ ಅಧಿಕಾರಿ ಎನ್ನುವ ಮೂಲಕ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ.
ದೇಶದ ಅತಿದೊಡ್ಡ ಅರೆಸೈನಿಕ ಪಡೆ ಮತ್ತು ಭಾರತದಾದ್ಯಂತ ಸಮವಸ್ತ್ರದಲ್ಲಿರುವ ಮಹಿಳೆಯರಿಗೆ ಅಪರೂಪದ ಮತ್ತು ಪ್ರಬಲ ಮೈಲಿಗಲ್ಲು ಎನ್ನಬಹುದು. ಈ ಪಥಸಂಚಲನದಲ್ಲಿ 140 ಕ್ಕೂ ಹೆಚ್ಚು ಪುರುಷ ಸಿಬ್ಬಂದಿಯನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿಯಾಗಿ ಇತಿಹಾಸದಲ್ಲಿ ತನ್ನ ಹೆಸರನ್ನು ಕೆತ್ತಲು ಸಜ್ಜಾಗಿದ್ದಾರೆ.
ಈ ಕ್ಷಣವನ್ನು ವಿವರಿಸಲು ತನ್ನ ಬಳಿ ಪದಗಳಿಲ್ಲ ಎಂದು ಮಾಧ್ಯಮಕ್ಕೆ ಸಿಮ್ರಾನ್ ಹೇಳಿದರು.
“ಇನ್ನೊಂದು ಭಾವನೆ ಇಲ್ಲ. ನನ್ನ ಮುಂದೆ ಮೆರವಣಿಗೆ ನಡೆಯುವುದನ್ನು ನೋಡುತ್ತಾ, ಇಂಡಿಯಾ ಗೇಟ್ ಎತ್ತರವಾಗಿ ನಿಂತಿದೆ – ದೇಶದ ಅತಿದೊಡ್ಡ ದಿನದಂದು ಈ ಪಡೆಯನ್ನು ಮುನ್ನಡೆಸುವುದು ಗೌರವ ಮತ್ತು ದೊಡ್ಡ ಜವಾಬ್ದಾರಿ. ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.
ಸಿಮ್ರಾನ್ ಬಾಲಾ ಅವರು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ಗ್ರಾಮವಾದ ನೌಶೇರಾದ ನಿವಾಸಿ. ಇವರು ಸದ್ಯ ಸಿಆರ್‌ಪಿಎಫ್‌ನಲ್ಲಿ ಅಸಿಸ್ಟಂಟ್ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಜಿಲ್ಲೆಯಿಂದ ಸಿಆರ್‌ಪಿಎಫ್‌ನಲ್ಲಿ ಅಧಿಕಾರಿಯಾಗಿ ಸೇರಿದ ಮೊದಲ ಮಹಿಳೆ. ಕಾಲೇಜು ಅಧ್ಯಯನದಲ್ಲಿ ಕಷ್ಟಪಡುತ್ತಲೇ ಅವರು ತಮ್ಮ ಮೊದಲ UPSC CAPF ಪ್ರಯತ್ನದಲ್ಲಿ ಉತ್ತೀರ್ಣರಾದರು, 151 ಅಭ್ಯರ್ಥಿಗಳಲ್ಲಿ 82 ನೇ ಅಖಿಲ ಭಾರತ ರ‍್ಯಾಂಕ್ ಗಳಿಸಿದರು. ಮೇ 2023 ರಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಜಮ್ಮು ಮತ್ತು ಕಾಶ್ಮೀರದಿಂದ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದರು.















