ನಾಳ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಜ.25 ರಂದು ನಡೆಯುವ ಮೋಕೆದ ಕಲಾವಿದೆರ್ ಅಭಿನಯಿಸುವ “ಮದಿಮೆದ ಇಲ್ಲಡ್” ನಾಟಕದ ರಚನೆಕಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಣಂಜಾರು ಶ್ರೀ ದಿನಕರ ಭಂಡಾರಿಯವರು ನಾಳ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಪ್ರಧಾನ ಅರ್ಚಕರಾದ ವೇ.ಮೂ. ರಾಘವೇಂದ್ರ ಅಸ್ಸಣ್ಣ ಹಾಗೂ ಮೋಕೆದ ಕಲಾವಿದೆರ್ ತಂಡದ ಸದಸ್ಯರು ಉಪಸ್ಥಿತರಿದ್ದರು.















