ಬೆಳ್ತಂಗಡಿ: ಯಕ್ಷಧ್ರುವ ಫೌಂಡೇಶನ್ ಮಂಗಳೂರು ಬೆಳ್ತಂಗಡಿ ಘಟಕ ಇದರ ವತಿಯಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಶ್ರೀ ಜ್ಞಾನಶಕ್ತಿ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗಜ ಕ್ಷೇತ್ರ ಪಾವಂಜೆ ಇವರು ಜ.24 ರಂದು ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ “ಬಪ್ಪನಾಡು ಕ್ಷೇತ್ರ ಮಹಾತ್ಮೆ” ಎಂಬ ಪೌರಾಣಿಕ ಕಥಾಭಾಗವನ್ನು ಆಡಿತೋರಿಸಲಿರುವರು ಎಂದು ಯಕ್ಷಧ್ರುವ ಪಟ್ಲ ಬೆಳ್ತಂಗಡಿ ಘಟಕದ ಪದಾಧಿಕಾರಿಗಳು ತಿಳಿಸಿದ್ದಾರೆ.















