ಕಳೆಂಜ: ಗ್ರಾಮದ ಕಾಯರ್ತಡ್ಕದಲ್ಲಿ ಪೋಸ್ಟ್ ಆಫೀಸ್ ಇದುವರೆಗೂ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಸರಕಾರದ ಆದೇಶದ ಪ್ರಕಾರ ಪೋಸ್ಟ್ ಆಫೀಸ್ ಶಾಖೆ ಬಾಡಿಗೆ ರಹಿತವಾಗಿ ಗ್ರಾಮ ಪಂಚಾಯತ್ ಕಛೇರಿ, ರಾಜೀವ್ ಗಾಂಧಿ ಸೇವಾಕೇಂದ್ರ ಪಂಚಾಯತ್ ಗೆ ಸಂಬಂಧಪಟ್ಟ ಕಟ್ಟಡದಲ್ಲಿ ಬಾಡಿಗೆ ರಹಿತವಾಗಿ ಕಾರ್ಯನಿರ್ವಹಿಸಬೇಕೆಂದಿ ದ್ದು ಈ ಹಿನ್ನೆಲೆಯಲ್ಲಿ ಪುತ್ತೂರಿನ ಮುಖ್ಯ ಅಂಚೆ ಕಚೇರಿಯಿಂದ ಕಳೆಂಜ ಗ್ರಾಮ ಪಂಚಾಯತ್ ಗೆ ಸೂಕ್ತ ಕಟ್ಟಡ ಒದಗಿಸುವಂತೆ ಮನವಿ ಸಲ್ಲಿಸಿದ್ದರು. ಅದರಂತೆ ಪಂಚಾಯತ್ ಪಿಡಿಓ ಮತ್ತು ಆಡಳಿತ ಮಂಡಳಿ ಪಂಚಾಯತ್ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲು ಸೂಕ್ತ ಕೊಠಡಿ ವ್ಯವಸ್ಥೆ ಮಾಡಿದ್ದಾರೆ.
ಸ್ಥಳಾಂತರಗೊಂಡು ಶುಭಾರಂಭ: ಜ.22ರಂದು ಪಂಚಾಯತ್ ಕಟ್ಟಡಕ್ಕೆ ಸ್ಥಳಾಂತರಗೊಂಡು ಪಂಚಾಯತ್ ಉಪಾಧ್ಯಕ್ಷ ಮಂಜುನಾಥ ಗೌಡ ಹಾರಿತ್ತ ಕಜೆ, ಪಿಡಿಓ ಹೊನ್ನಮ್ಮ ಮತ್ತು ಪೋಸ್ಟ್ ಮಾಸ್ಟರ್ ಸ್ಮಿತಾ ಹಾಗೂ ಪಂಚಾಯತ್ ಕಾರ್ಯದರ್ಶಿ ಹೊನ್ನಪ್ಪ ಗೌಡ ಮತ್ತು ಸಿಬ್ಬಂದಿಗಳ ಸಮ್ಮುಖದಲ್ಲಿ ದೀಪ ಬೆಳಗಿಸುವ ಮೂಲಕ ಶುಭಾರಂಭಗೊಂಡಿದೆ.















