ಪಡಂಗಡಿ: ಚಿರತೆ ಹಾವಳಿ ಹೆಚ್ಚಿದ್ದು, ಇದೀಗ ಇನ್ನೊಂದು ವರದಿಯ ಪ್ರಕಾರ, ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಕೆನ್ನೊಟ್ಟು ಲ್ಯಾನ್ಸಿ ಗಿಲ್ಲೊ ಅವರ ಮನೆಯ ನಾಯಿಮರಿಯನ್ನು ಚಿರತೆ ಹೊತ್ತೊಯ್ದಿದಿರುವ ಘಟನೆ ನಡೆದಿದೆ.
ಬುಧವಾರ (ನಿನ್ನೆ) ಮಧ್ಯರಾತ್ರಿ ನಾಯಿಗಳು ಬೊಗಳಲು ಆರಂಭಿಸಿದ್ದು, ಹೊರಗೆ ಬಂದು ನೋಡಿದ ಸಂದರ್ಭದಲ್ಲಿ ಚಿರತೆ ನಮ್ಮ ನಾಯಿಮರಿಯನ್ನು ಕಚ್ಚಿಕೊಂಡು ಓಡುತ್ತಿತ್ತು ಎಂದು ಲ್ಯಾನ್ಸಿ ಗಿಲ್ಲೊ ಮಾಹಿತಿ ನೀಡಿದ್ದಾರೆ ಎನ್ನುವ ವರದಿಯಾಗಿದೆ.
ಮಂಗಳವಾರ ಇದೇ ರಾತ್ರಿ ಗ್ರಾಮದ ಆಲ್ವಿನ್ ಮೋನಿಸ್ ಎಂಬವರಿಗೆ ಚಿರತೆ ಕಾಣಸಿಕ್ಕಿದ್ದು, ಅದೇ ದಿನ ಬೆಳಿಗ್ಗೆ ರಬ್ಬರ್ ತೋಟಕ್ಕೆ ಬಂದಿದ್ದು, ಕಾರ್ಮಿಕರಿಗೆ ಚಿರತೆ ಕಾಣಸಿಕ್ಕಿರುವುದಾಗಿ ಮಾಹಿತಿ ಬಂದಿದೆ. ಜನ ರಾತ್ರಿ ವೇಳೆ ಓಡಾಡಲು ಭಯ ಪಡುವ ಸ್ಥಿತಿ ನಿರ್ಮಾಣ ಆಗಿದ್ದು, ಚಿರತೆ ಗೂಡು ಅಳವಡಿಸಿಬೇಕೆಂಬ ಆಗ್ರಹ ಕೇಳಿ ಬಂದಿದೆ















