

ಮಂಗಳೂರು; ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಎಲ್ಲರ ಮುಖದಲ್ಲಿ ನಗು ತರಿಸುತ್ತಿದ್ದ, ಇದರಿಂದಲೇ ಖ್ಯಾತಿ ಗಳಿಸಿದ್ದ ಪಡೀಲ್ದ ಆಶಾಕ್ಕ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ವೈರಲ್ ಸ್ಟಾರ್ ಆಶಾ ಪಂಡಿತ್, ತುಳು ರಂಗಭೂಮಿಯಲ್ಲಿ ಇವರು ಕೆಲಸ ಮಾಡಿದ್ದಾರೆ. ನಿನ್ನೆ ರಾತ್ರಿ ವಾಂತಿ ಬಂದಿದ್ದು, ಇಂದು ಬೆಳಗ್ಗೆ ಅವರು ನಿಧನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಆಶಾ ಪಂಡಿತ್ ಪಡೀಲ್ನಲ್ಲಿ ಒಂದು ಅಂಗಡಿ ಇಟ್ಟುಕೊಂಡಿದ್ದು, ಅಲ್ಲಿಂದಲೇ ವಿಡಿಯೋ ಮಾಡಿ ವೈರಲ್ ಆಗಿದ್ದರು.













