Home News ಇ.ಡಿ ದಾಖಲಿಸಿದ್ದ ಎರಡು ಕೇಸ್‌ ಗಳಲ್ಲಿ ಕೇಜ್ರವಾಲ್ ಖುಲಾಸೆ

ಇ.ಡಿ ದಾಖಲಿಸಿದ್ದ ಎರಡು ಕೇಸ್‌ ಗಳಲ್ಲಿ ಕೇಜ್ರವಾಲ್ ಖುಲಾಸೆ

Arvind Kejriwal

Hindu neighbor gifts plot of land

Hindu neighbour gifts land to Muslim journalist

ಹೊಸದಿಲ್ಲಿ: ಅಬಕಾರಿ ನೀತಿ ಹಗರಣದ ತನಿಖೆ ಸಂಬಂಧ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ್ದ ಎರಡು ಪ್ರಕರಣಗಳಿಂದ ದಿಲ್ಲಿ ಮಾಜಿ ಸಿಎಂ ಅರವಿಂದ್ ಕೇಜಿವಾಲ್ ಅವರನ್ನು ಗುರುವಾರ ದಿಲ್ಲಿ ಕೋರ್ಟ್ ಖುಲಾಸೆಗೊಳಿಸಿದೆ.

ಅಬಕಾರಿ ಹಗರಣದಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆಯ (ಪಿಎಂಎಲ್‌ಎ) ಸೆಕ್ಷನ್ 50ರ ಅಡಿಯಲ್ಲಿ ಕೇಜಿವಾಲ್‌ಗೆ 3.3 ಸಮನ್ಸ್ ಜಾರಿಗೊಳಿಸಿತ್ತು. ಪದೇಪದೇ ವಿಚಾರಣೆಗೆ ಗೈರು ಹಾಜರಾಗಿದ್ದ ಕೇಜ್ರವಾಲ್ ವಿರುದ್ದ 2 ಕೇಸ್ ದಾಖಲಿಸಿದ್ದ ಇ.ಡಿ 2024ರ ಫೆಬ್ರವರಿಯಲ್ಲಿ ನ್ಯಾಯಾಲಯದ ಮೊರೆ ಹೋಗಿತ್ತು.

ಹಗರಣದ ತನಿಖೆಗೆ ಸಂಬಂಧಿಸಿದಂತೆ ವಿವಿಧ ದಿನಾಂಕಗಳಲ್ಲಿ ಸಮನ್ಸ್‌ಗಳನ್ನು ನೀಡಿದ್ದರೂ ಕೇಜ್ರವಾಲ್ ಇ.ಡಿ ವಿಚಾರಣೆಗೆ ಹಾಜರಾಗಿರಲಿಲ್ಲ.