Home News ಜೋಡುಸ್ಥಾನ: 25ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ-ರಸ್ತೆಗೆ ಡಾ.ಡಿ.ವೀರೇಂದ್ರ ಹೆಗ್ಗಡೆ ಹೆಸರು ನಾಮಕರಣ

ಜೋಡುಸ್ಥಾನ: 25ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ-ರಸ್ತೆಗೆ ಡಾ.ಡಿ.ವೀರೇಂದ್ರ ಹೆಗ್ಗಡೆ ಹೆಸರು ನಾಮಕರಣ

Hindu neighbor gifts plot of land

Hindu neighbour gifts land to Muslim journalist

ಜೋಡುಸ್ಥಾನ ರಸ್ತೆಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಹೆಸರು-ಹರ್ಷೇಂದ್ರ ಕುಮಾರ್ ರಿಂದ ಅನಾವರಣ:
ಇಲ್ಲಿನ ಜೋಡುಸ್ಥಾನಕ್ಕೆ ತೆರಳುವ ರಸ್ತೆಗೆ “ಪದ್ಮವಿಭೂಷಣ ಡಾ|| ಡಿ. ವೀರೇಂದ್ರ ಹೆಗ್ಗಡೆ” ರಸ್ತೆ ಎಂಬುದಾಗಿ ನಾಮಕರಣ ಮಾಡಲಾಗಿದ್ದು, ಇದರ ನಾಮಫಲಕದ ಅನಾವರಣವನ್ನು ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ನೆರವೇರಿಸಿದರು. ಇದಾದ ನಂತರ ಸಭಾ ಕಾರ್ಯಕ್ರಮ ನಡೆಯಿತು. ಈ ವೇಳೆ ಭಜನಾ ಮಂಡಳಿಯ ಸ್ಥಾಪಕ ಸದಸ್ಯರನ್ನು ಸನ್ಮಾನಿಸಲಾಯಿತು.ಈ ವೇಳೆ ಬೆನ್ನು ಹುರಿ ಸಮಸ್ಯೆಯಿಂದ ಬಳಲುತ್ತಿರುವ ವಿಶ್ವನಾಥ್ ರವರಿಗೆ ಗಾಳಿ ಕುರ್ಚಿ ವಿತರಿಸಲಾಯಿತು. ನಂತರ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದಿಂದ ಸಂಗೀತ ಗಾನ ಸಂಭ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾ.ಪಂ.ಅಧ್ಯಕ್ಷೆ ವಿಮಲ,ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಸದಸ್ಯರಾದ ಸುಧಾಕ‌ರ್, ಮುರುಳಿದಾಸ್, ರವಿಕುಮಾರ್, ದಿನೇಶ್ ರಾವ್, ಸುನಿತಾ, ಶ್ರೀ ನಿತ್ಯನೂತನ ಭಜನಾ ಮಂಡಳಿಯ ಗೌರವಾಧ್ಯಕ್ಷ ಪಿ ಲಕ್ಷ್ಮೀನಾರಾಯಣ ರಾವ್, ರಜತ ಸಂಭ್ರಮ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್, ಶ್ರೀ ನಿತ್ಯನೂತನಭಜನಾ ಮಂಡಳಿಯ ಅಧ್ಯಕ್ಷ ಅಭಿಷೇಕ್, ರಜತ ಸಂಭ್ರಮ ಸಮಿತಿ ಕಾರ್ಯದರ್ಶಿ ಜಗದೀಶ್, ಭಜನಾ ಮಂಡಳಿಯ ಕಾರ್ಯದರ್ಶಿ ಜ್ಯೋತಿ ಮುಂತಾದವರು ಉಪಸ್ಥಿತರಿದ್ದರು.