

ಹೊಸ ಉತ್ಪನ್ನ ಬಿಡುಗಡೆಗೊಳಿಸಿದ ಮುಖ್ಯಮಂತ್ರಿ
10 ರೂ. ಮೌಲ್ಯದ ಹಾಲು, ಮೊಸರಿನ ಪ್ಯಾಕೆಟ್ಗಳೊಂದಿಗೆ ಮೀಡಿಯಂ ಫ್ಯಾಟ್ ಇರುವ ಪನೀರ್, ಹೈ ಆರೋಮ ತುಪ್ಪ, ಪ್ರೊಬಯಾಟಿಕ್ ಮಾವಿನ ಲಸ್ಸಿ, ಡೇರಿ ವೈಟ್ನರ್ ಸೇರಿದಂತೆ ಒಟ್ಟು ಹತ್ತು ಹೊಸ ಉತ್ಪನ್ನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಶುಕ್ರವಾರ ಬಿಡುಗಡೆ ಮಾಡಿದರು.
ಕರ್ನಾಟಕ ಸಹಕಾರ ಉತ್ಪಾದಕ ಮಹಾಮಂಡಳ (ಕೆಎಂಎಫ್) ನಂದಿನಿ ಬ್ಯಾಂಡ್‌ನ ಹಾಲು 160 ಎಂಎಲ್‌ಗೆ 10 ರೂ. ಹಾಗೂ ಮೊಸರು 140 ಎಂಎಲ್ ಪ್ಯಾಕ್‌ಗೆ 10 ರೂ. ಮೌಲ್ಯದಲ್ಲಿ ಮರುಕಟ್ಟೆಗೆ ಬಿಟ್ಟಿದೆ. ಈವರೆಗೆ 200 ಎಂಎಲ್‌ನ ಪ್ಯಾಕೆಟ್ ಇತ್ತು. ಕೆಲವೊಮ್ಮೆ ಮನೆಯಲ್ಲೇ ಒಬ್ಬರೇ ಇದ್ದರೆ 200 ಎಂಎಲ್ ಹೆಚ್ಚಾಗಿ ಉಳಿಯುತ್ತಿತ್ತು. ಹಳೆಯ ಹಾಲು/ಮೊಸರು ಸಂಗ್ರಹಿಸಿಡುವುದು ಕಷ್ಟವಾಗುತ್ತಿತ್ತು. ಹೀಗಾಗಿ, ತಾಜಾ ಹಾಲು/ಮೊಸರು ದಿನಕ್ಕಾಗುವಷ್ಟನ್ನು ತಂದು ಬಳಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಡಿಮೆ ಮೊತ್ತಕ್ಕೆ ಕಡಿಮೆ ಪ್ರಮಾಣದಲ್ಲಿ ಬಳಸಲು ನೆರವಾಗುತ್ತದೆ.
ಸಮಾರಂಭದಲ್ಲಿ ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ. ನಂಜೇಗೌಡ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ, ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿ ಎಸ್. ಜಿಯಾವುಲ್ಲಾ, ಕೆಎಂಎಫ್‌ನ ಆಡಳಿತಾಧಿ ಟಿ.ಎಚ್.ಎಂ ಕುಮಾರ್ ಉಪಸ್ಥಿತರಿದ್ದರು.
ಉತ್ಪನ್ನಗಳ ದರ ಎಷ್ಟು?
ಎನ್-ಪ್ರೊ ಮಿಲ್ಕ್ (ಹೈ ಪ್ರೋಟೀನ್ ಯುಕ್ತ ಹಾಲು): ಅರ್ಧ ಲೀಟರ್ 27 ರೂ.
ಪನೀರ್ (ಮೀಡಿಯಂ ಫ್ಯಾಟ್): 5 ರೂ. ಆರಂಭಿಕ ರಿಯಾಯಿತಿ, 200 ಗ್ರಾಂಗೆ 90 ರೂ.
ಗುಡ್ ಲೈಫ್ ಶುದ್ಧ ತುಪ್ಪ (ಹೈ ಅರೋಮಾ): 500 ಎಂಎಲ್‌ಎ ಗೆ ರೂ.380 .
ನಂದಿನಿ ಶುದ್ಧ ತುಪ್ಪ; 200 ಎಂಎಲ್‌ಗೆ 165ರೂ, 500 ಎಂಎಲ್‌ಎ ಗೆ 360ರೂ, ಒಂದು ಲೀಟರ್‌ಗೆ 720 ರೂ.
ಪ್ರೊಬಯಾಟಿಕ್ ಮೊಸರು: 200 ಗ್ರಾಂಗೆ 35 ರೂ. (ಆರಂಭಿಕ ರಿಯಾಯಿತಿ 5 ರೂ.)
ಪ್ರೊ ಬಯಾಟಿಕ್ ಮಾವಿನ ಲಸ್ಸಿ: 160 ಎಂಎಲ್ ಪ್ಯಾಕ್ 15 ರೂ.
ಪ್ರೊ ಬಯಾಟಿಕ್ ಸ್ಟ್ರಾಬೆರಿ ಲಸ್ಸಿ: 160 ಎಂಎಲ್ ಪ್ಯಾಕ್ 15 ರೂ.
ಡೇರಿ ವೈಟ್ನರ್: 14 ಗ್ರಾಂಗೆ 5 ರೂ., 200 ಗ್ರಾಂಗೆ 90 ರೂ., 1 ಕೆ.ಜಿಗೆ 355 ರೂ.
(10 ಕೆ.ಜಿಯವರೆಗೆ ಲಭ್ಯ)













