

ಪುತ್ತೂರು: ಕೆಮ್ಮಿಂಜೆ ಕಲ್ಲಗುಡ್ಡೆಯಲ್ಲಿ ಬಾರ್ ಆಂಡ್ ರೆಸ್ಟೋರೆಂಟ್ ಹೊಂದಿರುವ ಉದ್ಯಮಿಗೆ, ತಿಂಗಳ ಹಿಂದೆ ಕೆಲಸ ಬಿಟ್ಟು ಹೋದ ವ್ಯಕ್ತಿ ಹಲ್ಲೆ ಮಾಡಿರುವ ಘಟನೆ ನಡೆದಿರುವ ಆರೋಪವಿದ್ದು, ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಮ್ಮಿಂಜೆ ಕಲ್ಲಗುಡ್ಡೆಯಲ್ಲಿ ಸ್ವಾತಿ ಬಾರ್ ಆಂಡ್ ರೆಸ್ಟೋರೆಂಟ್ ಹೊಂದಿರುವ ವಿಜಯ ಬಿಎಸ್ ಮತ್ತು ಅಲ್ಲಿದ್ದ ಪ್ರಸಾದ್ ಎನ್ನುವವರಿಗೆ ಬಾರ್ನಲ್ಲಿ ಹಿಂದೆ ಅಡುಗೆ ಕೆಲಸ ಮಾಡಿಕೊಂಡಿದ್ದ ಗಿರೀಶ್ ಎನ್ನುವ ವ್ಯಕ್ತಿ ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ.
ಗಿರೀಶ್ ಅವರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದು, ಜ19 ರಂದು ವಾಪಸು ಬಾರ್ಗೆ ಬಂದು, ʼನಾನು ಅಡುಗೆ ಸಮಯ ತಂದಿರುವ ಪಾತ್ರೆಗಳು ಇಲ್ಲಿದೆ. ಅದನ್ನು ಕೊಂಡು ಹೋಗಲು ಬಂದಿರುವುದಾಗಿ ಹೇಳಿದ್ದಾರೆ. ಆಗ ವಿಜಯ ಬಿ.ಎಸ್ ಅವರು ಇಲ್ಲಿ ನಿಮ್ಮ ಒಂದೇ ಪಾತ್ರೆ ಇರುವುದು ಎಂದಾಗ, ಗಿರೀಶ್ ಕೋಪದಿಂದ ವಿಜಯ್ ಅವರಿಗೆ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಹಲ್ಲೆ ನಡೆಯುತ್ತಿರುವುದನ್ನು ಬಿಡಿಸಲು ಬಂದ ಪ್ರಸಾದ್ ಎನ್ನುವವರಿಗೂ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ಕುರಿತು ವಿಜಯ ಬಿ.ಎಸ್ ಅವರು ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.













