Home News ಸಿಯೋನ್ ಆಶ್ರಮದಲ್ಲಿ ಉಚಿತ ದಂತ ಚಿಕಿತ್ಸಾ ಹಾಗೂ ಆರೋಗ್ಯ ತಪಾಸಣಾ

ಸಿಯೋನ್ ಆಶ್ರಮದಲ್ಲಿ ಉಚಿತ ದಂತ ಚಿಕಿತ್ಸಾ ಹಾಗೂ ಆರೋಗ್ಯ ತಪಾಸಣಾ

Hindu neighbor gifts plot of land

Hindu neighbour gifts land to Muslim journalist

ಗಂಡಿಬಾಗಿಲು: ಸಿಯೋನ್ ಆಶ್ರಮದಲ್ಲಿ ಉಚಿತ ದಂತ ಚಿಕಿತ್ಸಾ ಹಾಗೂ ಆರೋಗ್ಯ ತಪಾಸಣಾ ಶಿಬಿರ ಜ.25 ರಂದು ಯೆನಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಹಾಗೂ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಯೆನಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ ದೇರಳಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

ಶಿಬಿರವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಡಾ.ಆಲ್ಪಿಯ ದಂತವೈದ್ಯರು, ಡಾ.ಆಯಿಷಾ ವೈದ್ಯಕೀಯ ಅಧಿಕಾರಿ, ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಯೆನಪೋಯ ಹಾಗೂ ಯೆನಪೋಯ ಆಸ್ಪತ್ರೆಯ ವೈದ್ಯರುಗಳ ತಂಡ ಶಿಬಿರಾರ್ಥಿಗಳನ್ನು ತಪಾಸಣೆ ನಡೆಸಿದರು.

150ಕ್ಕೂ ಅಧಿಕ ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊಂಡರು. ಸಿಯೋನ್ ಸಂಸ್ಥೆಯ ಟ್ರಸ್ಟಿ ಸದಸ್ಯೆ ಶ್ರೀ ಮತಿ ಮೇರಿ ಯು ಪಿ., ವೈದ್ಯಾಧಿಕಾರಿ ಡಾ.ಶಿವಾನಂದಸ್ವಾಮಿ, ಯೆನೆಪೋಯ ಸಂಸ್ಥೆಯ ವೈದ್ಯಕೀಯ ಸಮಾಜ ಸೇವಕರಾದ ಗಾಯತ್ರಿ ಪೂಜಾರಿ, ಸಿಯೋನ್ ಆಶ್ರಮದ ಆಡಳಿತ ಮಂಡಳಿಯವರು ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿಯವರಾದ ಸಿಂಧು ವಿ.ಎಂ. ಕಾರ್ಯಕ್ರಮ ನಿರೂಪಿಸಿದರು.