Home News ನಡ: ಕೊನೆಗೂ ಬೋನಿಗೆ ಬಿದ್ದ ಚಿರತೆ

ನಡ: ಕೊನೆಗೂ ಬೋನಿಗೆ ಬಿದ್ದ ಚಿರತೆ

Hindu neighbor gifts plot of land

Hindu neighbour gifts land to Muslim journalist

ನಡ: ನಡ ಪ್ರದೇಶದಲ್ಲಿ ಚಿರತೆ ಹಾವಳಿಯಿಂದ ಕಂಗೆಟ್ಟ ಮಂದಿ ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ. ಅರಣ್ಯ ಇಲಾಖೆ ಜ.26 ರಂದು ಚಿರತೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಚಿರತೆಯನ್ನು ಹಿಡಿಯಲು ವಿಶೇಷ ತಂಡ ರಚಿಸಿ ಚಿರತೆ ಚಲಿಸುವ ಸ್ಥಳವನ್ನು ಗುರುತಿಸಿ ತಾಲೂಕಿನ ಅನೇಕ ಸ್ಥಳದಲ್ಲಿ ವಿಶೇಷ ಬೋನ್‌ ಇಡಲಾಗಿತ್ತು. ಇದೀಗ ಚಿರತೆ ಸೆರೆಯಾಗಿದೆ.

ಸಾಧಾರಣ ಒಂದು ತಿಂಗಳಿನಿಂದ ಕಾಡಿನಿಂದ ನಗರ ಪ್ರದೇಶಕ್ಕೆ ಬಂದು ಓಡಾಡುತ್ತಾ, ಸಾರ್ವಜನಿಕರಿಗೆ ಭಯ ಹುಟ್ಟಿಸಿದ ಚಿರತೆ, ಅರಣ್ಯ ಇಲಾಖೆ ಸಿಬ್ಬಂದಿಯವರು ನಿರಂತರ ಕಾರ್ಯದಿಂದ ಇದೀಗ ಬೋನಿಗೆ ಬಿದ್ದಿದೆ. ಕಳೆದ ಮೂರು ವಾರದಿಂದ ವಿಶೇಷ ಕಾರ್ಯಾಚರಣೆ ಪಡೆ ಅದರ ಸೆರೆಗೆ ಹರಸಾಹಸ ಪಡುತ್ತಿತ್ತು.

ನಡ ಗ್ರಾಮಸ್ಥರಲ್ಲಿ ಭಯ ಆತಂಕ ಮೂಡಿಸಿದ್ದ ಚಿರತೆ, ಇದರಿಂದ ಜನರು ಹಗಲು ಸಮಯದಲ್ಲೂ ಮನೆಯಿಂದ ಹೊರಗೆ ಬರಲು ಭಯ ಪಡುತ್ತಿದ್ದರು. ಮುಂಜಾಗ್ರತಾ ಕ್ರಮವಾಗಿ ಅರಣ್ಯ ಇಲಾಖೆ ಚಿರತೆ ಕಾಣಿಸಿಕೊಂಡ ಸ್ಥಳದಲ್ಲಿ ಬೋನು ಇಟ್ಟು ಸೆರೆಗೆ ಯೋಜನೆ ರೂಪಿಸಿದರು. ಅರಣ್ಯ ಇಲಾಖೆ ಚಿರತೆ ಚಲಿಸುವ ಸ್ಥಳವನ್ನು ಗುರುತಿಸಿ ಅನೇಕ ಸ್ಥಳದಲ್ಲಿ ವಿಶೇಷ ಬೋನ್‌ ಇಟ್ಟಿದ್ದರು. ಕನ್ಯಾಡಿ ಕಯ್ಯಾಂಗ್‌ ಕೊಡಪಟ್ಯ ಮಂಜಪ್ಪ ನಾಯ್ಕ ಎನ್ನುವವರ ಮನೆಯ ಬಳಿ ಕೊನೆಗೂ ಚಿರತೆಯ ಯಶಸ್ವಿ ಕಾರ್ಯಾಚರಣೆ ನಡೆದಿದ್ದು, ಬೋನಿಗೆ ಬಿದ್ದ ಚಿರತೆ, ಇದೀಗ ಒಂದು ಬೋನಿಯಲ್ಲಿ ಸೋಮವಾರ ಸೆರೆಯಾಗಿದೆ. ಇದರಿಂದ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.