

ಶಿಕಾರಿಪುರ (ಶಿವಮೊಗ್ಗ): ಚಿತ್ರನಟ ಪುನೀತ್ ರಾಜಕುಮಾರ್ ನೆನಪಿಗಾಗಿ ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ 25 ಜೋಡಿಯ ಕುಸ್ತಿ ಪಂದ್ಯಾವಳಿಯನ್ನು ಜ.26ರಂದು ಪಟ್ಟಣದ ಮಾರಿಕಾಂಬ ಬಯಲು ರಂಗಮಂದಿರ ಆವರಣದಲ್ಲಿ ಏರ್ಪಡಿಸಲಾಗಿದೆ.
ಪುನೀತ್ ಅಭಿಮಾನಿಗಳು ಮತ್ತು ಕುಸ್ತಿ ಅಭಿಮಾನಿ ಬಳಗದ ವತಿಯಿಂದ ಮಧ್ಯಾಹ್ನ 3ಕ್ಕೆ ಪಂದ್ಯಾವಳಿ ಆರಂಭಿಸಲಾಗುತ್ತದೆ ಎಂದು ಕುಸ್ತಿ ಸಮಿತಿ ಅಧ್ಯಕ್ಷ ಗೋಣಿ ಸಂದೀಪ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕುಸ್ತಿ ಪಂದ್ಯಾವಳಿಗೆ ರಷ್ಯಾದ ಕಝಕಿಸ್ತಾನದ ಕುಸ್ತಿಪಟು ಜಾನ್, ನೇಪಾಳದಿಂದ ದೇವ್ತಾಪ ಮುಂತಾದ ಸುಪ್ರಸಿದ್ಧ ಕುಸ್ತಿಪಟುಗಳು ಆಗಮಿಸುತ್ತಿದ್ದಾರೆ.
ಇದೇ ಮೊದಲ ಬಾರಿಗೆ ವಿದೇಶಗಳ ಖ್ಯಾತ ಕುಸ್ತಿಪಟುಗಳು ಶಿಕಾರಿಪುರಕ್ಕೆ ಆಗ ಮಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಪುನೀತ್ ರಾಜ್ ಕುಮಾರ್ ಜನ್ಮದಿನದ ಅಂಗವಾಗಿ ಪಂದ್ಯಾವಳಿ ಆಯೋಜಿಸಲಾಗುತ್ತಿದೆ,” ಎಂದರು.
ವಿಜೇತ ಪಟುಗಳಿಗೆ ಮೊದಲ ಬಹುಮಾನ 3 ಲಕ್ಷ ರೂ., ಎರಡನೇ ಬಹುಮಾನ ಒಂದೂವರೆ ಲಕ್ಷ ರೂ.. ಮೂರನೇ ಬಹುಮಾನ ಒಂದು ಲಕ್ಷ ರೂ. ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು. ನಾಲ್ಕನೇ ಬಹುಮಾನವಾಗಿ ನಂತರದ ಜೋಡಿಗಳಿಗೆ, 5ನೇ ನಾಲ್ಕು ಬಹುಮಾನವಾಗಿ ನಂತರದ 5 ಜೋಡಿ ಗಳಿಗೆ, 6ನೆಯ ಬಹುಮಾನವಾಗಿ ನಂತರದ 5 ಜೋಡಿಗಳಿಗೆ, 7ನೆ ಬಹುಮಾನವಾಗಿ ನಂತರದ 5 ಜೋಡಿಗಳಿಗೆ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿ ನೀಡಲಾಗುತ್ತದೆ













