Home News ಅಂಚೆ ಇಲಾಖೆ: ಜ.30ರಂದು ನೇರ ಸಂದರ್ಶನ

ಅಂಚೆ ಇಲಾಖೆ: ಜ.30ರಂದು ನೇರ ಸಂದರ್ಶನ

Post office

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಜೀವ ವಿಮೆ ಪಾಲಿಸಿಗಳನ್ನು ಮಾರಾಟ ಮಾಡಲು ಪ್ರತಿನಿಧಿಗಳ ನಿಯುಕ್ತಿಗಾಗಿ ಅಂಚೆ ಇಲಾಖೆಯು ಇದೇ 30ರಂದು ಬೆಳಿಗ್ಗೆ 11ಕ್ಕೆ ಅಭ್ಯರ್ಥಿ ನೇರ ಸಂದರ್ಶನ ಏರ್ಪಡಿಸಿದೆ.

ಸ್ವವಿವರ, ಶೈಕ್ಷಣಿಕ ಪ್ರಮಾಣ ಪತ್ರದ ನಕಲು ಪ್ರತಿಗಳೊಂದಿಗೆ ಮಹಾಲಕ್ಷ್ಮಿಪುರ ಪೊಲೀಸ್ ಠಾಣೆ ಬಳಿಯ ಬೆಂಗಳೂರು ಪಶ್ಚಿಮ ಅಂಚೆ ವಿಭಾಗ, ಅಧೀಕ್ಷಕರ ಕಚೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ನಿರುದ್ಯೋಗಿಗಳು, ಸ್ವಯಂ ಉದ್ಯೋಗಿಗಳು, ವಿಮಾ ಕಂಪನಿಗಳ ಮಾಜಿ ಏಜೆಂಟರು, ಮಾಜಿ ಸೈನಿಕರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾ. ಪಂ.ಗಳ ಮಾಜಿ ಸದಸ್ಯರು, ಮಹಿಳಾ ಮಂಡಲ ಕಾರ್ಯಕರ್ತೆಯರು ಭಾಗವಹಿಸಬಹುದು. ಆಯ್ಕೆಯಾಗು ವವರು ರಾಷ್ಟ್ರೀಯ ಉಳಿತಾಯ ಪತ್ರದ ರೂಪದಲ್ಲಿ ₹5,000 ಭದ್ರತಾ ಠೇವಣಿ ಇಡಬೇಕು. ವ್ಯವಹಾರಕ್ಕೆ ತಕ್ಕಂತೆ ಕಮಿಷನ್ ನೀಡಲಾಗುವುದು. ವಿವರಗಳಿಗೆ 7975127704/080-23493283 ಸಂಪರ್ಕಿಸುವುದು.